alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನ ಸಿನೆಮಾ ಸೋತಿದ್ದಕ್ಕೆ ನಿರ್ದೇಶಕರ ಮೇಲೆ ಗರಂ ಆಗಿದ್ದಾರೆ ನಟ

ranbir-5

ಬಾಲಿವುಡ್ ನಿರ್ದೇಶಕ ಅನುರಾಗ್ ಬಸು ಮೇಲೆ ನಟ ರಿಶಿ ಕಪೂರ್ ಗರಂ ಆಗಿದ್ದಾರೆ. ರಣಬೀರ್ ಕಪೂರ್ ಅಭಿನಯದ ಜಗ್ಗಾ ಜಾಸೂಸ್ ಚಿತ್ರದ ಸೋಲಿಗೆ ನಿರ್ದೇಶಕ ಅನುಗಾರ್ ಬಸು ಅವರೇ ಕಾರಣ ಅಂತಾ ಹೇಳಿದ್ದಾರೆ. ಅಷ್ಟೇ ಅಲ್ಲ ಅನುರಾಗ್ ಬಸುವನ್ನು ಬೇಜವಾಬ್ಧಾರಿ ವ್ಯಕ್ತಿ ಅಂತಾ ಕರೆದಿದ್ದಾರೆ.

ಈ ಚಿತ್ರ ಸೆಟ್ಟೇರಿ ವರ್ಷವೇ ಕಳೆದಿತ್ತು. ಬಿಡುಗಡೆ ಕೂಡ ವಿಳಂಬವಾಗಿತ್ತು. ಪದೇ ಪದೇ ರಿಲೀಸ್ ದಿನಾಂಕವೂ ಬದಲಾಗಿತ್ತು. ಇದರಿಂದಾಗಿಯೇ ಸಿನೆಮಾ ನೆಲಕಚ್ಚಿದೆ ಅನ್ನೋದು ರಿಶಿ ಕಪೂರ್ ಅಭಿಪ್ರಾಯ. ರಣಬೀರ್ ಕಪೂರ್ ಹಾಗೂ ಕತ್ರೀನಾ ಕೈಫ್ ಜೋಡಿಯಾಗಿ ನಟಿಸಿರುವ ಈ ಚಿತ್ರ ಎರಡು ವಾರಗಳ ಹಿಂದೆ ಬಿಡುಗಡೆಯಾಗಿದೆ.

ಆದ್ರೆ ಬಾಕ್ಸ್ ಆಫೀಸ್ ನಲ್ಲಿ ಜಗ್ಗಾ ಜಾಸೂಸ್ ಕಲೆಕ್ಷನ್ ಅಷ್ಟಕ್ಕಷ್ಟೆ. ರಣಬೀರ್ ಕಪೂರ್ ಕೂಡ ಈ ಚಿತ್ರದ ನಿರ್ಮಾಪಕರು. ಹಾಗಾಗಿ ಮಗನ ಚಿತ್ರ ಸೋತಿರೋದು ರಿಶಿ ಕಪೂರ್ ಗೆ ನಿರಾಸೆ ತಂದಿದೆ. ತಾವು ಸಿನೆಮಾ ಅಲ್ಲ ಅಣುಬಾಂಬ್ ತಯಾರಿಸ್ತಿದ್ದೇವೆ ಎಂಬಂತೆ ಈಗಿನ ನಿರ್ದೇಶಕರೆಲ್ಲ ಬಿಲ್ಡಪ್ ಕೊಡ್ತಾರೆ ಅಂತಾ ರಿಶಿ ಕಿಡಿಕಾರಿದ್ದಾರೆ.

ಅಷ್ಟೇ ಅಲ್ಲ ಜಗ್ಗಾ ಜಾಸೂಸ್ ನಲ್ಲಿ ಗೋವಿಂದ ನಟಿಸಿದ್ದ ಭಾಗವನ್ನು ಕತ್ತರಿಸಿ ಹಾಕಿರೋದು ಕೂಡ ತಪ್ಪು ಅಂತಾ ಹೇಳಿದ್ದಾರೆ. ಇದರಿಂದ ರಣಬೀರ್ ಇಮೇಜ್ ಗೂ ಕಳಂಕ ಬಂದಿದೆ, ಅನುರಾಗ್ ಬಸುಗೆ ಶಿಸ್ತೇ ಇಲ್ಲ. ಬೇಡ ಅಂದ್ಮೇಲೆ ಗೋವಿಂದ ಅವರನ್ನು ನಟಿಸುವಂತೆ ಕೇಳಿ, ಸೀನ್ ಗಳನ್ನು ಶೂಟ್ ಮಾಡಿಸಿಕೊಂಡಿದ್ದೇ ತಪ್ಪು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...