alex Certify
ಕನ್ನಡ ದುನಿಯಾ       Mobile App
       

Kannada Duniya

ಮಗ ರಣಬೀರ್ ಪ್ರೀತಿ ಬಗ್ಗೆ ಮೌನ ಮುರಿದ ರಿಷಿ ಕಪೂರ್

ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ನಟ ರಣಬೀರ್ ಕಪೂರ್ ಪ್ರೀತಿ ವಿಚಾರ ಅನೇಕ ದಿನಗಳಿಂದ ಸುದ್ದಿಯಲ್ಲಿದೆ. ಈ ಬಗ್ಗೆ ಆಲಿಯಾ ಹಾಗೂ ರಣಬೀರ್ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಆದ್ರೆ ಮಗನ ಪ್ರೀತಿ ವಿಚಾರವನ್ನು ರಣಬೀರ್ ಕಪೂರ್ ತಂದೆ ರಿಷಿ ಕಪೂರ್ ಒಪ್ಪಿಕೊಂಡಿದ್ದಾರೆ.

ಯಾವಾಗ್ಲೂ ನೇರವಾಗಿ ಮಾತನಾಡುವ ರಿಷಿ, ಮಗನ ವಿಚಾರದಲ್ಲೂ ನೇರವಾಗಿ ಉತ್ತರ ನೀಡಿದ್ದಾರೆ. ರಣಬೀರ್ ಗೆ ಆಲಿಯಾ ತುಂಬಾ ಇಷ್ಟ. ಕೇವಲ ಮಗನಿಗೆ ಮಾತ್ರವಲ್ಲ ನನಗೆ ಹಾಗೂ ಪತ್ನಿ ನೀತಾಗೆ ಕೂಡ ಆಲಿಯಾ ಇಷ್ಟವಾಗ್ತಾಳೆಂದು ರಿಷಿ ಕಪೂರ್ ಹೇಳಿದ್ದಾರೆ.

ಇದು ರಣಬೀರ್ ಜೀವನ. ಅವನಿಗಿಷ್ಟವಾಗುವುದನ್ನು ಅವನು ಆಯ್ಕೆ ಮಾಡಿಕೊಳ್ತಾನೆ. ನಾನು, ನನ್ನ ಅಂಕಲ್ ಶಮಿ ಕಪೂರ್ ಮತ್ತು ಶಶಿ ಕಪೂರ್ ನಮ್ಮ ಜೀವನ, ಸಂಗಾತಿಯನ್ನು ನಾವೇ ಆಯ್ಕೆ ಮಾಡಿಕೊಂಡಿದ್ದೆವು. ಹಾಗೆ ರಣಬೀರ್ ಕೂಡ ಅವನಿಗಿಷ್ಟವಾಗುವ ಹುಡುಗಿಯನ್ನು ಆಯ್ಕೆ ಮಾಡಿಕೊಳ್ತಾನೆ. ನಾವು ಯಾವುದೇ ಒತ್ತಡ ಹೇರುವುದಿಲ್ಲವೆಂದು ರಿಷಿ ಕಪೂರ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...