alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಿ’ ಗೆ ಆಕ್ಷನ್-ಕಟ್ ಹೇಳ್ತಾರಾ ಕಿರಿಕ್ ಡೈರೆಕ್ಟರ್?

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ನಲ್ಲಿ ಮನೆ ಮಾತಾದ ನಿರ್ದೇಶಕ ರಿಷಬ್ ಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಮೂಲಕ ಮತ್ತೆ ಜನರ ಮುಂದೆ ಬರ್ತಿದ್ದಾರೆ. ಚಿತ್ರ ನಿರ್ದೇಶನದ ಜೊತೆಗೆ ಬೆಲ್ ಬಾಟಮ್ ಸಿನಿಮಾದ ನಾಯಕರಾಗಿಯೂ ನಟಿಸ್ತಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ಬಿಡುಗಡೆಯ ಜೊತೆಯಲ್ಲೇ ರಿಷಬ್ ಈಗ ಬಿಗ್ ಪ್ರಾಜೆಕ್ಟ್ ಒಂದನ್ನ ಶುರುಮಾಡುವ ನಿರೀಕ್ಷೆಯಲ್ಲಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಂದಿಗೆ ಕೆಲಸ ಮಾಡುವ ಬಗ್ಗೆ ರಿಷಬ್ ಶೆಟ್ಟಿ ಪ್ರಯತ್ನ ಮುಂದುವರೆಸಿದ್ದಾರೆ.

ಈಗಾಗ್ಲೇ ಅಮಿತಾಬ್ ಬಚ್ಚನ್ ಅವರನ್ನ ಮುಂಬೈನಲ್ಲಿ ಭೇಟಿಯಾಗಿರುವ ನಿರ್ದೇಶಕ ರಿಷಬ್ ಶೆಟ್ಟಿ, ತಮ್ಮ ಸ್ಟೋರಿಯನ್ನ ಅಮಿತಾಬ್ ಅವರಿಗೆ ತಿಳಿಸಿದ್ದಾರಂತೆ. ಅಮಿತಾಬ್ ಅವರು ರಿಷಬ್ ಶೆಟ್ಟಿಯವರ ಸ್ಕ್ರಿಪ್ಟನ್ನು ಮೆಚ್ಚಿಕೊಂಡಿದ್ದಾರೆ ಅಂತ ಹೇಳಲಾಗ್ತಿದೆ. ಆದ್ರೆ ಚಿತ್ರದಲ್ಲಿ ನಟಿಸುವ ಬಗ್ಗೆ ಅಮಿತಾಬ್ ಬಚ್ಚನ್ ತಮ್ಮ ಅಭಿಪ್ರಾಯವನ್ನು ತಿಳಿಸಿಲ್ಲ ಎನ್ನಲಾಗಿದೆ.

ಎಲ್ಲವೂ ಅಂದುಕೊಂಡ ಹಾಗೆ ಆದ್ರೆ ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಅಮಿತಾಬ್ ಬಚ್ಚನ್ ಅವರ ಕಡೆಯಿಂದ ಶುಭ ಸುದ್ದಿ ಸಿಗಲಿದೆ ಅಂತ ಹೇಳಲಾಗ್ತಿದೆ. ಹಾಗಾಗಿ ಸಿನಿಮಾದ ಬಗ್ಗೆ ಈಗ ಸ್ಯಾಂಡಲ್ವುಡ್ನಲ್ಲಿ ಕುತೂಹಲ ಹೆಚ್ಚಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...