alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇಲ್ಲಿದೆ ಸಂಭ್ರಮದ ಸುದ್ದಿ

ಕಿಚ್ಚನ ಹಾಲಿವುಡ್ ಎಂಟ್ರಿಗೆ ವೇದಿಕೆ ರೆಡಿಯಾಗಿದೆ. ‘ರನ್ನ’ನಿಗಾಗಿ ನ್ಯೂಯಾರ್ಕ್ ಸಿಟಿ ಸಜ್ಜಾಗಿದೆ. ‘ರೈಸನ್’ಗಾಗಿ ‘ಹೆಬ್ಬುಲಿ’ ಅದ್ದೂರಿ ತಯಾರಿ ನಡೆಸಿದೆ. ಹೇಗೆ ಅಂತಿರಾ? ಮುಂದೆ ಓದಿ.

ಈಗಾಗಲೇ 4 ಪ್ರಮುಖ ಚಿತ್ರರಂಗದಲ್ಲಿ ತಮ್ಮ ಖದರ್ ತೋರಿಸಿರುವ ಕಿಚ್ಚ ಸುದೀಪ್, ಹಾಲಿವುಡ್ ಮಂದಿಗೂ ಬೇಕಾಗಿದ್ದಾರೆ. ಹೌದು, ಕನ್ನಡ, ಹಿಂದಿ, ತೆಲುಗು, ತಮಿಳು ಚಿತ್ರಗಳ ಬಳಿಕ ಸುದೀಪ್ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಲಿದ್ದು, ಈಗಾಗಲೇ ತಯಾರಿ ನಡೆಸಿದ್ದಾರೆ.

ಹಾಲಿವುಡ್ ಸಿನಿಮಾದಲ್ಲಿ ಸುದೀಪ್ ಬಣ್ಣ ಹಚ್ಚುವುದು ಕನ್ ಫರ್ಮ್ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಕಾತರ ಹೆಚ್ಚಾಗಿದೆ.

ಅವರು ‘ರೈಸನ್’ ಟೀಂ ಸೇರಿಕೊಳ್ಳಲು ವೇದಿಕೆ ಸಜ್ಜಾಗಿದೆ. ಆಸ್ಟ್ರೇಲಿಯಾದ ಯಡ್ಡಿ ಆರ್ಯ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈಗಾಗಲೇ ಟ್ರೇಲರ್ ಕೂಡ ಹೊರ ಬಿದ್ದಿದ್ದು, ಕುತೂಹಲ ಮೂಡಿಸಿದೆ. ಶೂಟಿಂಗ್ ಪ್ಲಾನ್ ಪ್ರಕಾರ ಈ ವೇಳೆಗಾಗಲೇ ಸುದೀಪ್ ಚಿತ್ರ ತಂಡವನ್ನು ಸೇರಿಕೊಳ್ಳಬೇಕಿತ್ತು.

‘ದಿ ವಿಲನ್’, ‘ಪೈಲ್ವಾನ್’ ಗಳಲ್ಲಿ ಬ್ಯುಸಿಯಾಗಿದ್ದ ಸುದೀಪ್, ಈಗ ‘ರೈಸನ್’ಗಾಗಿ ಬಿಡುವು ಮಾಡಿಕೊಂಡಿದ್ದಾರೆ. ಜನವರಿ ಕೊನೆಯಲ್ಲಿ ಹಾಲಿವುಡ್ ಗೆ ಹಾರಲಿದ್ದಾರೆ. ಅಕ್ಟೋಬರ್ ಇಲ್ಲವೇ ನವೆಂಬರ್ ನಲ್ಲಿ ಅವರು ‘ರೈಸನ್’ ತಂಡವನ್ನು  ಸೇರಿಕೊಳ್ಳಬೇಕಿತ್ತು. ಜನವರಿ ಕೊನೆಯಲ್ಲಿ ನ್ಯೂಯಾರ್ಕ್ ಗೆ ತೆರಳಲಿದ್ದಾರೆ.

ಅಮೆರಿಕದಲ್ಲಿರುವ ನಾಗೇಂದ್ರ ಜಯರಾಮ್ ರೈಸನ್ ಚಿತ್ರದ ಬೆನ್ನುಲುಬಾಗಿ ನಿಂತಿದ್ದು ಕಿಚ್ಚನ ಆಗಮನ ಎದುರು ನೋಡುತ್ತಿದ್ದಾರೆ. ಯು.ಎಸ್. ಆರ್ಮಿ ಆಫೀಸರ್ ಆಗಿ ಸುದೀಪ್ ಕಾಣಿಸಿಕೊಳ್ತಿದ್ದು, ವಾರ್ ಫೀಲ್ಡ್ ನಲ್ಲಿ ಹಾಗೂ ಭಾವನಾತ್ಮಕ ಸನ್ನಿವೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದಾರೆ.

ಸೈನ್ಸ್ ಫಿಕ್ಷನ್ ಸಿನಿಮಾ ಇದಾಗಿದ್ದು, ವಿಷಕಾರಿ ಅನಿಲ ಗಾಳಿಯಲ್ಲಿ ಹರಡಿ ನಗರದ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತೆ. ಅದರಿಂದ ಮನುಕುಲದ ಮೇಲೆ ಏನೆಲ್ಲಾ ಅನಾಹುತವಾಗುತ್ತೆ. ಸುದೀಪ್ ಹೇಗೆಲ್ಲಾ ಜನರನ್ನು ಪಾರು ಮಾಡ್ತಾರೆ ಎನ್ನುವುದು ಚಿತ್ರದ ಕತೆಯಾಗಿದೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, 4 ವಾರ ಅಮೆರಿಕದಲ್ಲಿ ಚಿತ್ರೀಕರಣ ನಡೆಸಲಾಗುವುದು. ಬಳಿಕ ಸಿಡ್ನಿ, ಕೆನಡಾದಲ್ಲಿ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...