alex Certify
ಕನ್ನಡ ದುನಿಯಾ       Mobile App
       

Kannada Duniya

ಪೇಶಾವರ್ ನಲ್ಲಿ ಶಶಿಕಪೂರ್ ಗೆ ಶ್ರದ್ಧಾಂಜಲಿ ಸಲ್ಲಿಸಿದ ಫ್ಯಾನ್ಸ್

ಬಾಲಿವುಡ್ ಹಿರಿಯ ನಟ ಶಶಿಕಪೂರ್ ಅವರಿಗೆ ಪಾಕಿಸ್ತಾನದ ಪೇಶಾವರ್ ನಲ್ಲಿ ಅಭಿಮಾನಿಗಳು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಪೇಶಾವರದಲ್ಲಿ ಶಶಿಕಪೂರ್ ಪೂರ್ವಿಕರು ನೆಲೆಸಿದ್ದರು. ಅಲ್ಲದೇ, ಶಶಿಕಪೂರ್ ಅವರಿಗೂ ಅಲ್ಲಿ ಅಭಿಮಾನಿಗಳಿದ್ದು, ನಟನ ನಿಧನಕ್ಕೆ ಅವರೆಲ್ಲಾ ನಮನ ಸಲ್ಲಿಸಿದ್ದಾರೆ.

ಐತಿಹಾಸಿಕ ಖಿಸ್ಸರ್ ಖ್ವಾನಿ ಬಜಾರ್ ಬಳಿ ಸೇರಿದ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಶಶಿಕಪೂರ್ ಅವರ ತಾತಾ ಪೇಶಾವರದಲ್ಲಿ ಮನೆ ಕಟ್ಟಿಸಿದ್ದರು. 90 ರ ದಶಕದ ಉತ್ತರಾರ್ಧದಲ್ಲಿ ಪೂರ್ವಿಕರ ಮನೆಗೆ ಶಶಿಕಪೂರ್ ಭೇಟಿ ನೀಡಿದ್ದರು.

ಅವರ ತಂದೆ ಪೃಥ್ವಿರಾಜ್ ಕಪೂರ್ ಪೇಶಾವರದಿಂದ ಮುಂಬೈಗೆ ಆಗಮಿಸಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡ ಬಳಿಕ ಪಾಕ್ ನಿಂದ ಅವರ ಕುಟುಂಬ ದೂರವಾಗಿತ್ತು.

ಶಶಿಕಪೂರ್ ಅನಾರೋಗ್ಯದಿಂದ ಸೋಮವಾರ ನಿಧನರಾಗಿದ್ದು, ಅವರ ಪಾಕ್ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿರುವುದು ವಿಶೇಷವಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...