alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿಗೆ ಪ್ಯಾಂಟ್ ಕೆಳಗಿಳಿಸಲು ಹೇಳಿದ್ದನಂತೆ ನೃತ್ಯ ಸಂಯೋಜಕ…!

ಬಾಲಿವುಡ್ ಸೇರಿದಂತೆ ಭಾರತದ ಎಲ್ಲೆಡೆ ‘ಮೀ ಟೂ’ ಅಭಿಯಾನ ಚುರುಕು ಪಡೆದಿದೆ. ಮೀ ಟೂ ಅಭಿಯಾನದಲ್ಲಿ ದಿಗ್ಗಜ ಕಲಾವಿದರ ಹೆಸರು ಬಹಿರಂಗವಾಗಿದೆ. ಭಾರತದಲ್ಲಿ ತನುಶ್ರೀ ದತ್ತಾ ಶುರು ಮಾಡಿದ ಅಭಿಯಾನ ಸ್ಯಾಂಡಲ್ ವುಡ್ ನಿಂದ ಹಿಡಿದು ಖಾಸಗಿ ಕಂಪನಿಗಳವರೆಗೂ ವ್ಯಾಪಿಸಿದೆ.

ಸದ್ಯ ಮೀ ಟೂ ಅಭಿಯಾನಕ್ಕೆ ನಟಿ ರಿಚಾ ಚಡ್ಡಾ ಎಂಟ್ರಿಯಾಗಿದ್ದಾಳೆ. ಫಕ್ರಿ, ಮಸಾನ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ರಿಚಾ, ತನ್ನ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಶೋಷಣೆ ಪ್ರತಿಯೊಬ್ಬ ವ್ಯಕ್ತಿ ಮೇಲಾಗುತ್ತದೆ. ಇದನ್ನು ನಾನೂ ಅನುಭವಿಸಿದ್ದೇನೆಂದು ರಿಚಾ ಹೇಳಿದ್ದಾಳೆ.

ಹಾಡೊಂದರ ಚಿತ್ರೀಕರಣ ನಡೆಯುತ್ತಿತ್ತಂತೆ. ಈ ವೇಳೆ ರಿಚಾ ಪ್ಯಾಂಟ್ ಧರಿಸಿದ್ದಳಂತೆ. ನೃತ್ಯ ಸಂಯೋಜಕರು ಮೇಡಂ, ನಿಮ್ಮ ಹೊಕ್ಕಳು ಕಾಣ್ತಿಲ್ಲ. ಪ್ಯಾಂಟನ್ನು ಸ್ವಲ್ಪ ಕೆಳಗೆ ಸರಿಸಿ ಎಂದಿದ್ದರಂತೆ.ಇದು ನನಗೆ ಆಶ್ಚರ್ಯ ಹುಟ್ಟಿಸಿತ್ತು. ನನ್ನ ಹೊಕ್ಕಳನ್ನು ನಾನು ಹಣೆ ಮೇಲೆ ಅಂಟಿಸಿಕೊಳ್ಳುತ್ತೇನೆಂದು ತಿರುಗೇಟು ನೀಡಿದ್ದೆ ಎಂದು ರಿಚಾ ಹೇಳಿದ್ದಾಳೆ.  ಕೆಲ ದಿನಗಳ ಹಿಂದಷ್ಟೆ ರಿಚಾ, ನಾನು ಯಾವುದೇ ಶೋಷಣೆಗೆ ಒಳಗಾಗಿಲ್ಲ ಎಂದು ಹೇಳಿಕೆ ನೀಡಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...