alex Certify
ಕನ್ನಡ ದುನಿಯಾ       Mobile App
       

Kannada Duniya

ಬೈಕ್ ನಲ್ಲಿ ಹಿಂಬಾಲಿಸಿದ ಫ್ಯಾನ್ಸ್ ಮೇಲೆ ನಟಿ ಮುನಿಸು

ಬಾಲಿವುಡ್ ನಟಿ ರೀಚಾ ಚಡ್ಡಾ ಅಭಿಮಾನಿಗಳ ವರ್ತನೆ ವಿರುದ್ಧ ಕಿಡಿಕಾರಿದ್ದಾಳೆ. ಬೈಕ್ ನಲ್ಲಿ ತನ್ನನ್ನು ಹಿಂಬಾಲಿಸಿಕೊಂಡು ಬರ್ತಿದ್ದ ಅಭಿಮಾನಿಗಳನ್ನು ರೀಚಾ ಚಡ್ಡಾ ತರಾಟೆಗೆ ತೆಗೆದುಕೊಂಡಿದ್ದಾಳೆ. ಈ ವಿಷ್ಯವನ್ನು ಟ್ವೀಟರ್ ನಲ್ಲಿ ರೀಚಾ ಹಂಚಿಕೊಂಡಿದ್ದಾಳೆ.

ಬಾಂದ್ರಾದಲ್ಲಿ ಕೆಲ ಅತಿಉತ್ಸಾಹಿ ಅಭಿಮಾನಿಗಳು ನನ್ನನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಮುಂದೆ ಬರ್ತಿದ್ದ ಸೈಕಲ್ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಇದ್ರಿಂದ ತೊಂದರೆಯಾಗಿದೆ. ಸೆಲ್ಫಿಗಾಗಿ ಅಭಿಮಾನಿಗಳು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಸುಧಾರಿಸಿಕೊಳ್ಳಿ ಎಂದು ರೀಚಾ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ನಟ ವರುಣ್ ಧವನ್ ಗೆ ಮುಂಬೈ ಪೊಲೀಸರು ದಂಡ ವಿಧಿಸಿದ್ದರು. ಧವನ್ ಕಾರಿನ ಕಿಟಕಿಯಿಂದ ಆಟೋದಲ್ಲಿ ಹೋಗ್ತಿದ್ದ ಪ್ರಯಾಣಿಕರ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದ. ನಂತ್ರ ವರುಣ್ ಈ ಬಗ್ಗೆ ಕ್ಷಮೆ ಕೇಳಿದ್ದಲ್ಲದೆ ಮುಂದೆ ಈ ರೀತಿ ಆಗುವುದಿಲ್ಲವೆಂದು ಭರವಸೆ ನೀಡಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...