alex Certify
ಕನ್ನಡ ದುನಿಯಾ       Mobile App
       

Kannada Duniya

ನಟ ವಿಜಯ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ

ಕಾಲಿವುಡ್ ನ ಬಹು ನಿರೀಕ್ಷಿತ ಚಿತ್ರವಾಗಿರುವ ಸರ್ಕಾರ್ ಚಿತ್ರದಲ್ಲಿರುವ ಅಕ್ಷೇಪಾರ್ಹ ದೃಶ್ಯಗಳನ್ನು ತಗೆಯುವಂತೆ ತಮಿಳುನಾಡಿನ ಸಚಿವರೊಬ್ಬರು ಚಿತ್ರತಂಡಕ್ಕೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ನಟ ವಿಜಯ್ ನಾಯಕನಾಗಿ ಕಾಣಿಸಿಕೊಂಡಿರುವ‌ ಹಾಗೂ ಎಆರ್ ಮುರುಗದಾಸ್ ನಿರ್ದೇಶನದ ಸರ್ಕಾರ್ ಚಿತ್ರದ ಹಾಡೊಂದರಲ್ಲಿ, ರಾಜ್ಯ ಸರಕಾರ ನೀಡಿರುವ ಮಿಕ್ಸರ್, ಗ್ರೈಡರ್ ಗಳನ್ನು ಬೆಂಕಿಗೆ ಹಾಕಿರುವ ದೃಶ್ಯ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಕೂಡಲೇ ಈ ದೃಶ್ಯವನ್ನು ತೆಗೆಯವಂತೆ ತಮಿಳುನಾಡಿನ ವಾರ್ತಾ ಮತ್ತು ಜನಸಂಪರ್ಕ ಇಲಾಖೆ ಸಚಿವ ಕದಂಬೂರ್ ಸಿ ರಾಜು ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಈ‌ ರೀತಿಯ ಚಿತ್ರಗಳನ್ನು ಜನ ಎಂದಿಗೂ ಒಪ್ಪುವುದಿಲ್ಲ. ಆದ್ದರಿಂದ ಚಿತ್ರತಂಡ ತಾವಾಗಿಯೇ ಈ ದೃಶ್ಯಗಳನ್ನು ತೆಗೆಯಬೇಕು. ಇಲ್ಲವಾದಲ್ಲಿ ರಾಜ್ಯ ಸರಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಖ್ಯಾತ ನಟನಾಗಿರುವ ವಿಜಯ್ ಅವರು ಈ ರೀತಿ ಚಿತ್ರಗಳನ್ನು ಮಾಡುವುದು ಅವರ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದಿರುವ ಅವರು, ಈ ನಡೆ ಬೇಸರ ತರಿಸಿದೆ ಎಂದಿದ್ದಾರೆ. ಇದಕ್ಕೂ ಮೊದಲು ವಿಜಯ್ ನಟನೆಯ ಮೆರ್ಸಲ್ ಚಿತ್ರದಲ್ಲಿ ಕೇಂದ್ರ ಸರಕಾರದ ಜಿ.ಎಸ್.ಟಿ. ವಿಚಾರವಾಗಿ ವಿವಾದಾತ್ಮಕವಾಗಿ ಬಿಂಬಿಸಲಾಗಿತ್ತು ಎಂದು ಬಿಜೆಪಿ ಆರೋಪಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...