alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀದೇವಿ ವೃತ್ತಿಪರತೆ ಬಗ್ಗೆ ಮಹೇಶ್ ಭಟ್ ಹೇಳಿದ್ದೇನು…?

ಬಾಲಿವುಡ್ ನ ಸೌಂದರ್ಯ ದೇವತೆ ಶ್ರೀದೇವಿ ಮೃತಪಟ್ಟು ಕೆಲ ದಿನಗಳಾಗಿದೆ. ಮಳೆ ನಿಂತರೂ ಮಳೆ ಹನಿ ನಿಲ್ಲದು ಅನ್ನೋ ಹಾಗೆ ಶ್ರೀದೇವಿಯ ವಿಶೇಷ ವ್ಯಕ್ತಿತ್ವದ ಗುಣಗಾನ ನಿಂತಿಲ್ಲ.

ಶ್ರೀದೇವಿ ವೃತ್ತಿಪರರಾಗಿದ್ದರು. ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದರು. ತಮಗೆ ತೊಂದರೆಯಾದರೂ ಬೇರೆಯವರಿಗೆ ಆಗದಿರಲಿ ಎಂದು ಬಯಸುವವರಾಗಿದ್ದರು. ಈ ಕುರಿತು ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ನೆನಪೊಂದನ್ನು ಬಿಚ್ಚಿಡುತ್ತಾರೆ.

“1993 ರಲ್ಲಿ ಗುಮ್ರಾ ಚಿತ್ರದ ಶೂಟಿಂಗ್ ವೇಳೆ, ಒಮ್ಮೆ ಮಳೆಯಲ್ಲಿ ಚಿತ್ರೀಕರಣ ಮಾಡಬೇಕಿತ್ತು. ಆದರೆ ಶ್ರೀದೇವಿ ಜ್ವರದಿಂದ ಬಳಲುತ್ತಿದ್ದರು. ಇದರಿಂದಾಗಿ ಶೂಟಿಂಗ್ ಅನ್ನು ಮುಂದೂಡಿದೆವು. ತಾನು ಹೋಗಿ ಆಕೆಯನ್ನು ಭೇಟಿಯಾಗಿ, ನಿಮಗೆ ಜ್ವರ ಕಡಿಮೆಯಾದ ಬಳಿಕವೇ ಶೂಟಿಂಗ್ ಮುಂದುವರಿಸೋಣ ಎಂದೆ. ಆದರೆ ಶ್ರೀದೇವಿ ಅದಕ್ಕೆ ಒಪ್ಪಿಕೊಳ್ಳಲಿಲ್ಲ. ತಾನು ನಟಿಸ್ತೀನಿ ಎಂದು ಗಂಟೆಗಟ್ಟಲೇ ಮಳೆಯಲ್ಲಿಯೇ ನಟನೆ ಮಾಡಿದರು.” ಇದು ಶ್ರೀದೇವಿಯ ವೃತ್ತಿಪರತೆಗೆ ಸಾಕ್ಷಿ  ಹಾಗೂ ಆಕೆಯ ಈ ಗುಣ ಎಲ್ಲರಿಗೂ ಸ್ಪೂರ್ತಿ ಎಂಬುದಾಗಿ ಮಹೇಶ್ ಭಟ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...