alex Certify
ಕನ್ನಡ ದುನಿಯಾ       Mobile App
       

Kannada Duniya

ರಾಪ್ ಸಾಂಗ್ ಹಾಡಿದ ನಟಿ ರೇಖಾ

ಹಿರಿಯ ನಟಿ ರೇಖಾ ನೃತ್ಯ ಹಾಗೂ ನಟನೆ ಬಗ್ಗೆ ಪ್ರಶ್ನೆ ಮಾಡುವಂತಿಲ್ಲ. ಈಗ್ಲೂ ನಟಿ ರೇಖಾ ವೇದಿಕೆ ಮೇಲೆ ಬಂದ್ರೆ ಶಿಳ್ಳೆ ಕೇಳುತ್ತೆ. ಹಿಂದೆ ಲಕ್ಷಾಂತರ ಅಭಿಮಾನಿಗಳ ಮನದನ್ನೆಯಾಗಿದ್ದ ರೇಖಾ ಮತ್ತೆ ತೆರೆ ಮೇಲೆ ಬರ್ತಿದ್ದಾರೆ. ರೇಖಾ ಈ ಬಾರಿ ರಾಪರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

‘ಯಮಲಾ ಪಗಲಾ ದಿವಾನಾ ಪಿರ್ ಸೇ’ ಚಿತ್ರದಲ್ಲಿ ರೇಖಾ ನಟಿಸಲಿದ್ದಾರೆ. ಸೋನಾಕ್ಷಿ ಸಿನ್ಹಾ ಜೊತೆ ರಾಪ್ ಹಾಡನ್ನ ಹಾಡಲಿದ್ದಾರೆ. ವರದಿ ಪ್ರಕಾರ ಹಾಡಿನಲ್ಲಿ ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ ಮತ್ತು ಶತ್ರುಘ್ನ ಸಿನ್ಹಾ ಕೂಡ ರೇಖಾ ಜೊತೆ ಕಾಣಿಸಿಕೊಳ್ಳಲಿದ್ದಾರೆ.

ಇದಕ್ಕಾಗಿ ರೇಖಾ ನೃತ್ಯ ನಿರ್ದೇಶಕ ರೆಮೊ ಜೊತೆ ಸೇರಿ ಸಾಕಷ್ಟು ತರಬೇತಿ ಪಡೆದಿದ್ದಾರಂತೆ. ಮುಂಬೈನ ಸ್ಟುಡಿಯೋ ಒಂದರಲ್ಲಿ ಹಾಡಿನ ರೆಕಾರ್ಡಿಂಗ್ ನಡೆದಿದೆ. ಈ ಚಿತ್ರದ ಇನ್ನೊಂದು ವಿಶೇಷವೆಂದ್ರೆ ಇದೇ ಮೊದಲ ಬಾರಿಗೆ ಸೋನಾಕ್ಷಿ, ತಂದೆ ಶತ್ರುಘ್ನ ಸಿನ್ಹಾ ಜೊತೆ ಕಾಣಿಸಿಕೊಳ್ಳಲಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...