alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತಾಬ್ ಸೊಸೆಗೆ ರೇಖಾ ಬರೆದಿದ್ದಾರೆ ಭಾವನಾತ್ಮಕ ಪತ್ರ

ಬಾಲಿವುಡ್ ಹಿರಿಯ ನಟಿ ರೇಖಾ ಹಾಗೂ ಅಮಿತಾಬ್ ಬಚ್ಚನ್ ಸೊಸೆ ಐಶ್ವರ್ಯ ರೈ ಬಚ್ಚನ್ ನಡುವೆ ಉತ್ತಮ ಬಾಂಧವ್ಯವಿದೆ. ಅನೇಕ ಸಂದರ್ಭಗಳಲ್ಲಿ ಇಬ್ಬರು ನಟಿಯರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈಗ ನಟಿ ರೇಖಾ, ಐಶ್ವರ್ಯ ರೈ ಬಚ್ಚನ್ ಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾಳೆ.

ಪತ್ರಿಕೆಯೊಂದರಲ್ಲಿ ಪ್ರಕಟವಾದ ಈ ಪತ್ರದಲ್ಲಿ ರೇಖಾ, ಐಶ್ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಪತ್ರದ ಆರಂಭದಲ್ಲಿ ನನ್ನ ಐಶ್ ಎಂದು ಶುರುಮಾಡಿರುವ ರೇಖಾ ಕೊನೆಯಲ್ಲಿ ನಿನ್ನ ತಾಯಿ ಎಂದು ಪತ್ರ ಮುಗಿಸಿದ್ದಾರೆ. ಐಶ್ ನಟಿಸಿದ ಚಿತ್ರಗಳ ಬಗ್ಗೆ ಹಾಗೂ ಆಕೆ ಪಾತ್ರಗಳ ಬಗ್ಗೆ ರೇಖಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರ ಜಗತ್ತಿನಲ್ಲಿ ಹಾಗೂ ಖಾಸಗಿ ಬದುಕಿನಲ್ಲಿ ನಿನ್ನ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದೀಯಾ. ನಿನ್ನಂತ ಮಹಿಳೆಯರು ನದಿಯಂತಿರುತ್ತಾರೆ. ಯಾವುದೇ ಅಡೆತಡೆ ಇಲ್ಲದೆ ಮುಂದೆ ಹೋಗಲು ಬಯಸುತ್ತಾರೆ ಎಂದು ರೇಖಾ ಬರೆದಿದ್ದಾರೆ.

ವಿಶ್ವದಲ್ಲಿ ಯಾರಿಗೂ ಏನನ್ನೂ ನೀನು ಸಾಭೀತುಪಡಿಸಬೇಕಾಗಿಲ್ಲ ಎಂದು ರೇಖಾ ಪತ್ರದಲ್ಲಿ ಹೇಳಿದ್ದಾರೆ. ಸದಾ ಖುಷಿಯಾಗಿರು ಎಂದು ಪ್ರಾರ್ಥನೆ ಮಾಡ್ತೇನೆ. ನಿನ್ನ ತಾಯಿ ಎಂದು ರೇಖಾ ಪತ್ರದಲ್ಲಿ ಬರೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...