alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತಾಬ್ ರಿಂದ ದೂರವಾದ್ಮೇಲೆ ಸಂಜಯ್ ದತ್ ಗೆ ಹತ್ತಿರವಾಗಿದ್ರು ರೇಖಾ

ಬಾಲಿವುಡ್ ನಲ್ಲಿ ನಟನೆ, ಸೌಂದರ್ಯದ ಜೊತೆ ಡಾನ್ಸ್ ಮೂಲಕ ಲಕ್ಷಾಂತರ ಅಭಿಮಾನಿಗಳ ನಿದ್ರೆ ಕದ್ದವರು ನಟಿ ರೇಖಾ. ಅಕ್ಟೋಬರ್ 10 ರಂದು ರೇಖಾ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ರೇಖಾ 64 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟಿ ರೇಖಾಗೆ ಚಿತ್ರರಂಗದ ಗಣ್ಯರು ಸೇರಿದಂತೆ ಅಭಿಮಾನಿ ಬಳಗ ಶುಭ ಹಾರೈಸುತ್ತಿದೆ.

ರೇಖಾ ಅನೇಕ ವರ್ಷಗಳಿಂದ ಬಣ್ಣದ ಲೋಕದಿಂದ ದೂರವಿದ್ದಾರೆ. ಆದ್ರೆ ಯಾವುದೇ ಕಾರ್ಯಕ್ರಮಕ್ಕೆ ಬಂದ್ರೂ ಗಮನ ಸೆಳೆಯೋದು ಮಾತ್ರ ಇವ್ರೆ. ರೇಖಾ ಸ್ಟೈಲ್ ಯುವ ಜನತೆಯನ್ನೂ ಆಕರ್ಷಿಸುತ್ತದೆ. 2014 ರಲ್ಲಿ ಸೂಪರ್ ನಾನಿ ಸಿನಿಮಾದಲ್ಲಿ ನಟಿಸಿದ್ದ ರೇಖಾ ವೈಯಕ್ತಿಕ ಜೀವನ ಮುಚ್ಚಿದ ಪುಸ್ತಕದಂತೆ. ಒಂದೊಂದು ಪುಟ ತೆರೆದುಕೊಂಡಾಗಲೂ ಒಂದೊಂದು ಆಶ್ಚರ್ಯಕಾರಿ ಸಂಗತಿ ಹೊರ ಬೀಳುತ್ತದೆ.

ರೇಖಾ ಹಾಗೂ ಅಮಿತಾಬ್ ಬಚ್ಚನ್ ಲವ್ ಸ್ಟೋರಿ ಎಲ್ಲರಿಗೂ ಗೊತ್ತು. ದೋ ಅಂಜಾನೆ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ರೇಖಾ ಹಾಗೂ ಅಮಿತಾಬ್ ಹತ್ತಿರವಾಗಿದ್ದರು. ಆದ್ರೆ ಪ್ರೀತಿ ಮುರಿದುಬಿದ್ದ ಮೇಲೆ ರೇಖಾ, ಅಮಿತಾಬ್ ಹೆಸರಿನಲ್ಲಿ ಸಿಂಧೂರವಿಡಲು ಶುರು ಮಾಡಿದ್ದಾರೆ ಎನ್ನಲಾಗುತ್ತದೆ. ಅಮಿತಾಬ್ ರಿಂದ ದೂರವಾದ ರೇಖಾ 5 ವರ್ಷ ಚಿಕ್ಕ ವಯಸ್ಸಿನ ನಟ ಸಂಜಯ್ ದತ್ ಗೆ ಹತ್ತಿರವಾಗಿದ್ದರಂತೆ. ಸಂಜಯ್ ದತ್ ಹಾಗೂ ರೇಖಾ ‘ಜಮೀನ್ ಆಸಮಾನ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ರೇಖಾ ದಿ ಅನ್ಟೋಲ್ಡ್ ಸ್ಟೋರಿ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...