alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಇನಿಂಗ್ಸ್ ಆರಂಭಿಸಿದ ರೇಖಾ

‘ಸ್ಪರ್ಶ’ ಖ್ಯಾತಿಯ ನಟಿ ರೇಖಾ ಮದುವೆಯಾದ ಬಳಿಕ ಚಿತ್ರರಂಗದಿಂದ ದೂರವಿದ್ದರು. ಹಿಂದಿನ ಸೀಸನ್ ನಲ್ಲಿ ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಅವರು ನಂತರದಲ್ಲಿ ಮತ್ತೆ ಬೆಳ್ಳಿತೆರೆಯತ್ತ ಮುಖಮಾಡಿದ್ದಾರೆ.

ನಿರ್ಮಾಪಕಿಯಾಗಿ ರೇಖಾ ಹೊಸ ಇನಿಂಗ್ಸ್ ಆರಂಭಿಸಿದ್ದು, ‘ಡೆಮೊ ಪೀಸ್’ ಎಂಬ ಚಿತ್ರವನ್ನು ನಿರ್ಮಾಣ ಮಾಡ್ತಿದ್ದಾರೆ. ವಿವೇಕ್ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರದಲ್ಲಿ ಕಿರುತೆರೆ ನಟ ಭರತ್, ನಟಿ ಸೋನಾಲ್ ಮೊಂಟೆರಿಯೊ, ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ರೇಖಾ ಬಿಡುಗಡೆಗೆ ಸಿದ್ಧಗೊಂಡಿರುವ ‘ಮೂಕನಾಯಕ’, ‘ಎಂ.ಎಲ್.ಎ.’ ಹಾಗೂ ‘ಲಖ್ನೋ ಟು ಬೆಂಗಳೂರು’ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರೇಖಾ ಅವರಿಗೆ ಹಲವು ಸಿನಿಮಾಗಳಲ್ಲಿ ಅಭಿನಯಿಸಲು ಅವಕಾಶಗಳು ಬರುತ್ತಿವೆಯಾದರೂ, ಅವರು ಬಂದ ಚಿತ್ರಗಳನ್ನೆಲ್ಲಾ ಒಪ್ಪಿಕೊಳ್ಳದೇ ಪಾತ್ರಗಳ ಕುರಿತಾಗಿ ಗಮನಹರಿಸಿದ್ದಾರೆ.

ಕಡಿಮೆ ಬಜೆಟ್ ನಲ್ಲಿ ಉತ್ತಮ ಚಿತ್ರಗಳನ್ನು ಕೊಡುವ ಆಶಯ ನಮ್ಮ ತಂಡದ್ದಾಗಿದೆ ಎಂದು ರೇಖಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...