alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ನೊಮ್ಮೆ ಮದುವೆಯಾಗ್ತಾರಾ ವಿರಾಟ್-ಅನುಷ್ಕಾ?

ಹಿಂದಿನ ವರ್ಷ ಭಾರೀ ಸುದ್ದಿ ಮಾಡಿದ್ದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆ. ಡಿಸೆಂಬರ್ 11ರಂದು ಇಟಲಿಯಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದ್ರೆ ರೋಮ್ ನಲ್ಲಿರುವ ಭಾರತೀಯ ರಾಯಭಾರಿಗಳಿಗೆ ಈ ಬಗ್ಗೆ ಮಾಹಿತಿಯಿರಲಿಲ್ಲ. ಇದು ಮದುವೆ ನೋಂದಣಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಇನ್ನೊಮ್ಮೆ ಕೊಹ್ಲಿ-ಅನುಷ್ಕಾ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗುವ ಸಾಧ್ಯತೆಯಿದೆ.

ಪಂಜಾಬ್-ಹರ್ಯಾಣ ಹೈಕೋರ್ಟ್ ವಕೀಲ ಹಾಗೂ ಅಂಬಾಲ ನಿವಾಸಿ ಹೇಮಂತ್ ಕುಮಾರ್ ಡಿಸೆಂಬರ್ 13ರಂದು ಆರ್ ಟಿ ಐ ಸಲ್ಲಿಸಿದ್ದರು. ಇದಕ್ಕೆ ಜನವರಿ 4ರಂದು ರೋಮ್ ನಲ್ಲಿರುವ ಭಾರತೀಯ ರಾಯಭಾರಿಗಳು ಉತ್ತರ ನೀಡಿದ್ದಾರೆ. ಇದ್ರ ಪ್ರಕಾರ ನಿಯಮಾನುಸಾರ ವಿರಾಟ್ ಹಾಗೂ ಅನುಷ್ಕಾ ಭಾರತೀಯ ರಾಯಭಾರಿ ಕಚೇರಿಯಲ್ಲಿರುವ ಅಧಿಕಾರಿಗಳಿಗೆ ಮದುವೆ ಬಗ್ಗೆ ಮಾಹಿತಿ ನೀಡಿಲ್ಲ. ವಿದೇಶದಲ್ಲಿ ಮದುವೆಯಾಗುವಾಗ ರಾಯಭಾರಿ ಕಚೇರಿಗೆ ಮಾಹಿತಿ ನೀಡುವುದು ಅತ್ಯಗತ್ಯ.

ವಿರಾಟ್ ಹಾಗೂ ಅನುಷ್ಕಾ ಮಾಹಿತಿ ನೀಡಿಲ್ಲ. ಇದ್ರಿಂದಾಗಿ ಮದುವೆ ನೋಂದಣಿಗೆ ತೊಂದರೆಯಾಗುವ ಸಾಧ್ಯತೆಯಿದೆ. ವಿರಾಟ್-ಅನುಷ್ಕಾ ಭಾರತದ ಯಾವ ಜಾಗದಲ್ಲಿ ನೆಲೆಸ್ತಾರೋ ಆ ರಾಜ್ಯದ ನಿಯಮಾನುಸಾರ ಮದುವೆ ನೋಂದಣಿ ಮಾಡಬೇಕಾಗುತ್ತದೆ. ಇದಕ್ಕಾಗಿ ಇನ್ನೊಮ್ಮೆ ರಿಜಿಸ್ಟರ್ ಮ್ಯಾರೇಜ್ ಆಗುವ ಅನಿವಾರ್ಯತೆ ಎದುರಾಗಬಹುದು ಎಂದು ಹೇಮಂತ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...