alex Certify
ಕನ್ನಡ ದುನಿಯಾ       Mobile App
       

Kannada Duniya

‘ಸ್ನೇಹಿತರ ದಿನಾಚರಣೆ’ ಸಂದರ್ಭದಲ್ಲೇ ಮತ್ತೇ ಒಗ್ಗೂಡುತ್ತಿದ್ದಾರೆ ಈ ಖ್ಯಾತ ನಟರು

ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಕುಚುಕು ಗೆಳೆಯರೆಂದೇ ಗುರುತಿಸಿಕೊಂಡಿದ್ದರು. ಆದರೆ ಇಬ್ಬರ ನಡುವೆ ವಿಷಯವೊಂದಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ತಲೆದೋರಿದ ಕಾರಣ ಪರಸ್ಪರ ಮುನಿಸಿಕೊಂಡಿದ್ದರು.

ಇದಾದ ಬಳಿಕ ಈ ಇಬ್ಬರು ಖ್ಯಾತ ನಟರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಮ್ಮ ನೆಚ್ಚಿನ ನಟನ ಪರ ವಕಾಲತ್ತು ವಹಿಸಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಇದೀಗ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ಖುಷಿ ಪಡುವ ವಿಚಾರವೊಂದು ಹೊರಬಿದ್ದಿದೆ.

ಕನ್ನಡ ಚಿತ್ರರಂಗದ ಹಿರಿಯಣ್ಣನೆಂದೇ ಪರಿಗಣಿಸಲ್ಪಟ್ಟಿರುವ ಖ್ಯಾತ ನಟ ರೆಬಲ್ ಸ್ಟಾರ್ ಅಂಬರೀಶ್, ಸುದೀಪ್ ಹಾಗೂ ದರ್ಶನ್ ಅವರನ್ನು ಮತ್ತೆ ಒಗ್ಗೂಡಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಕಿಚ್ಚ ಸುದೀಪ್ ನಿರ್ಮಾಣದ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ನಾಯಕ ನಟನಾಗಿರುವ ಅಂಬರೀಶ್, ಆಗಸ್ಟ್ 10 ರಂದು ನಡೆಯಲಿರುವ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಆಹ್ವಾನಿಸಿದ್ದು ಇದರಲ್ಲಿ ಪಾಲ್ಗೊಳ್ಳಲು ದರ್ಶನ್ ಸಹ ಸಮ್ಮತಿಸಿದ್ದಾರೆ ಎಂದು ಹೇಳಲಾಗಿದೆ.

ಈ ಸಮಾರಂಭದಲ್ಲಿ ಸುದೀಪ್ ಹಾಗೂ ದರ್ಶನ್ ನಡುವಿನ ಭಿನ್ನಾಭಿಪ್ರಾಯ ಬಗೆಹರಿಯಲಿದ್ದು ‘ಸ್ನೇಹಿತರ ದಿನಾಚರಣೆ’ ಸಂದರ್ಭದಲ್ಲಿ ಈ ಖ್ಯಾತ ನಟರು ಮತ್ತೆ ಒಗ್ಗೂಡುತ್ತಿರುವುದು ವಿಶೇಷ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...