alex Certify
ಕನ್ನಡ ದುನಿಯಾ       Mobile App
       

Kannada Duniya

ರವಿತೇಜಾಗೆ ಸೆಕೆಂಡ್ ಹೀರೋಯಿನ್ ಆಗ್ತಿದ್ದಾರೆ ಶೃತಿ ಹಾಸನ್…!

ದಕ್ಷಿಣ ಭಾರತದ ಹೆಸರಾಂತ ನಟಿ ಶೃತಿ ಹಾಸನ್ ಮತ್ತೆ ಸುದ್ದಿಯಲ್ಲಿದ್ದಾರೆ. ತೆಲುಗು ನಟ ರವಿತೇಜಾ ಜೊತೆ ಸೆಕೆಂಡ್ ಹೀರೋಯಿನ್ ಆಗಿ ನಟಿಸಲು ರೆಡಿಯಾಗಿದ್ದಾರಂತೆ. ಹೌದು, ರವಿತೇಜಾ ಅವರ ಮುಂದಿನ ಚಿತ್ರ ‘ಅಮರ್, ಅಕ್ಬರ್, ಆಂತೋನಿ’ ಯಲ್ಲಿ ಸೆಕೆಂಡ್ ಹೀರೋಯಿನ್ ಆಗಿ ಶೃತಿ ನಟಿಸುತ್ತಿದ್ದಾರಂತೆ. ಇದಕ್ಕೂ ಮುನ್ನ ‘ಬಲೂಪು’ ಚಿತ್ರದಲ್ಲಿ ಇಬ್ಬರು ಒಟ್ಟಾಗಿ ನಟಿಸಿದ್ರು.

ಬಹು ನಿರೀಕ್ಷಿತ ಚಿತ್ರಲ್ಲಿ ಫಸ್ಟ್ ಹೀರೋಯಿನ್ ಆಗಿ ಅನು ಎಮ್ಯಾನುಯೆಲ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರವಿತೇಜಾ ಅಮರ್, ಅಕ್ಬರ್, ಆಂತೋನಿಯಾಗಿ ತ್ರಿಬಲ್ ಆ್ಯಕ್ಟಿಂಗ್ ಮಾಡ್ತಿದ್ದು, ಮೂರನೇ ಹೀರೋಯಿನ್ ಗಾಗಿ ನಿರ್ಮಾಪಕರು ಹುಡುಕಾಟದಲ್ಲಿದ್ದಾರೆ.

ಶೃತಿ ಹಾಸನ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ‘ಕಾಟಮರಾಯಡು’ ದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ರು. ಆದ್ರೆ ಈ ಚಿತ್ರ ಪ್ರೇಕ್ಷಕರ ನಿರೀಕ್ಷೆ ಗಳಿಸುವಲ್ಲಿ ವಿಫಲವಾಗಿತ್ತು. ಅಲ್ಲದೆ ಬಾಕ್ಸ್ ಆಫೀಸ್ ನಲ್ಲೂ ತೋಪೆದ್ದು ಹೋಗಿತ್ತು. ಸಧ್ಯ ರವಿತೇಜಾಗೆ ಸೆಕೆಂಡ್ ಹೀರೋಯಿನ್ ಆಗಿ ಬರ್ತಿರುವ ಶೃತಿಗೆ ಈ ಚಿತ್ರ ಬ್ರೇಕ್ ಕೊಡುತ್ತಾ ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...