alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಗಳಿಗೆ ಸಿಹಿ ಸುದ್ದಿ

anajaj

ಕನ್ನಡದಲ್ಲಿ ಹಳೆಯ ಸಿನಿಮಾಗಳು ತೆರೆಗೆ ಬರುವುದು ಹೊಸದೇನಲ್ಲ. ಹಲವು ಯಶಸ್ವಿ ಚಿತ್ರಗಳು ಹೊಸ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆಯಾಗಿ ಯಶಸ್ವಿಯಾಗಿವೆ.

ವರನಟ ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್ ಸೇರಿದಂತೆ ಹಲವು ನಟರ ಚಿತ್ರಗಳು ಮರು ಬಿಡುಗಡೆಯಾಗಿವೆ. ಈಗ ಕ್ರೇಜಿಸ್ಟಾರ್ ರವಿಚಂದ್ರನ್ ಸರದಿ. ಹೌದು, ಸುಮಾರು 25 ವರ್ಷಗಳ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದ ‘ಅಂಜದ ಗಂಡು’ ಚಿತ್ರ ಮರು ಬಿಡುಗಡೆಯಾಗುತ್ತಿದೆ. ಬಿ.ಎನ್. ಗಂಗಾಧರ್ ನಿರ್ಮಾಣ, ರೇಣುಕಾಶರ್ಮ ನಿರ್ದೇಶನದಲ್ಲಿ ಮೂಡಿಬಂದಿದ್ದ, ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದಾರೆ.

ರವಿಚಂದ್ರನ್ ಅವರೊಂದಿಗೆ ಖಷ್ಬು, ಶ್ರೀನಿವಾಸಮೂರ್ತಿ, ಅರವಿಂದ್, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು ಮೊದಲಾದವರು ಅಭಿನಯಿಸಿದ್ದಾರೆ. ಡಿಸೆಂಬರ್ 2 ರಂದು 5.1 ಸೌಂಡ್ ಸಿಸ್ಟಂನೊಂದಿಗೆ ‘ಅಂಜದ ಗಂಡು’ ಮರು ಬಿಡುಗಡೆಯಾಗಲಿದ್ದು, ರವಿಚಂದ್ರನ್ ಅಭಿಮಾನಿಗಳಿಗೆ ಸಂಭ್ರಮ ಹೆಚ್ಚಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...