alex Certify
ಕನ್ನಡ ದುನಿಯಾ       Mobile App
       

Kannada Duniya

ಟಿವಿ ಶೋಗಾಗಿ ಅತಿ ಹೆಚ್ಚು ಹಣ ಪಡೆಯುತ್ತಿದ್ದಾಳೆ ರವೀನಾ

Raveena-9-580x395

ಬಾಲಿವುಡ್ ನಟಿ ರವೀನಾ ಟಂಡನ್ ಕಿರುತೆರೆಗೆ ಬರ್ತಿದ್ದಾರೆ ಎನ್ನುವ ಸುದ್ದಿಯನ್ನು ನಾವು ನಿಮಗೆ ಹೇಳಿದ್ದೇವೆ. ಈಗ ಮತ್ತೆ ರವೀನಾ ಸುದ್ದಿಯಲ್ಲಿದ್ದಾರೆ. ಕಿರುತೆರೆಯಲ್ಲಿ ಅತಿ ಹೆಚ್ಚು ಹಣ ಪಡೆಯಲಿರುವ ಬಾಲಿವುಡ್ ನಟಿ ಎಂಬ ಹೆಗ್ಗಳಿಕೆಗೆ ರವೀನಾ ಪಾತ್ರರಾಗಲಿದ್ದಾರೆ.

ಶೈನ್ ಅಫ್ ಇಂಡಿಯಾ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳಲಿರುವ ರವೀನಾಗೆ ಪ್ರತಿ ಎಪಿಸೋಡ್ ಗೆ 1.25 ಕೋಟಿ ಸಿಗಲಿದೆ.ಈ ಮೂಲಕ ಟಿವಿಯಲ್ಲಿ ಅತಿ ಹೆಚ್ಚು ಗಳಿಸುವ ಬಾಲಿವುಡ್ ಬೆಡಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಶೈನ್ ಅಫ್ ಇಂಡಿಯಾದಲ್ಲಿ ಗೋವಿಂದ ಜೊತೆಗೆ ಸರೋಜ್ ಖಾನ್ ಜೊತೆ ನಿರ್ಣಾಯಕ ಪಾತ್ರ ನಿಭಾಯಿಸಲಿದ್ದಾಳೆ ರವೀನಾ. ಇದಕ್ಕಾಗಿ ರವೀನಾಗೆ ದೊಡ್ಡ ಮೊತ್ತ ನೀಡಲಾಗ್ತಿದೆ ಎಂದು ಬಲ್ಲ ಮೂಲಗಳು ಹೇಳಿವೆ.

ಬಾಲಿವುಡ್ ಮಂದಿ ಕಿರುತೆರೆಗೆ ಬರೋದು ಹಳೆ ವಿಚಾರ. ಬಾಲಿವುಡ್ ಸ್ಟಾರ್ ಗಳು ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದರಿಂದ ಡಬಲ್ ಮನರಂಜನೆ ಸಿಗುತ್ತದೆ. ಹಾಗಾಗಿ ರವೀನಾಗೆ 1.25 ಕೋಟಿ ನೀಡಲು ಚಾನೆಲ್ ಒಪ್ಪಿಕೊಂಡಿದೆ.

ಈ ಹಿಂದೆ ಶಿಲ್ಪಾ ಶೆಟ್ಟಿ ಹಾಗೂ ಮಾಧುರಿ ದೀಕ್ಷಿತ್ ಕೂಡ ಬೇರೆ ಬೇರೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಪ್ರತಿ ಎಪಿಸೋಡ್ ಗೆ 1 ಕೋಟಿ ಸಿಗ್ತಾ ಇತ್ತಂತೆ. ಈಗ ರವೀನಾ ಸರದಿ. ಹಾಗೆ ಶೈನ್ ಆಫ್ ಇಂಡಿಯಾ ವಿ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...