alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ರವೀನಾ ಟಂಡನ್ ಪುತ್ರಿಯ ಮದುವೆ..!

raveena-tand

ಬಾಲಿವುಡ್ ನಟಿ ರವೀನಾ ಟಂಡನ್ ಅವರ ಪುತ್ರಿಯ ಮದುವೆ ಗೋವಾದ ಚರ್ಚ್ ನಲ್ಲಿ ವೈಭವದಿಂದ ನಡೆಯಿತು. ಅರೇ, ರವೀನಾ ಟಂಡನ್ ಗೆ ಅಷ್ಟು ದೊಡ್ಡ ಮಗಳಿದ್ದಾಳಾ ಎಂದು ಅಚ್ಚರಿಗೊಳಗಾದಿರಾ? ಆಶ್ಚರ್ಯವಾದರೂ ನಿಜ. ರವೀನಾ ಪುತ್ರಿಯ ಮದುವೆ ನಡೆದಿದೆ.

ರವೀನಾಟಂಡನ್ ಅವರ ಕಿರಿಯ ಪುತ್ರಿ ಛಾಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಗೋವಾದ ಚರ್ಚ್ ನಲ್ಲಿ ಶಾನ್ ಮೆಂಡೀಸ್ ಅವರನ್ನು ಮದುವೆಯಾಗಿದ್ದಾರೆ. ರವೀನಾ ಟಂಡನ್ ಚಿತ್ರರಂಗದಲ್ಲಿ ಉನ್ನತ ಸ್ಥಾನದಲ್ಲಿದ್ದಾಗ ಇಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆದು ಸಾಕಿ ಸಲಹಿದ್ದರು. ಅವರಲ್ಲಿ ಕಿರಿಯ ಪುತ್ರಿ ಛಾಯಾ ಅವರ ವಿವಾಹ ಗೋವಾದಲ್ಲಿ ನಡೆದಿದ್ದು, ಮದುವೆಯ ಸಂಭ್ರಮದ ಕ್ಷಣಗಳನ್ನು ರವೀನಾ ಟಂಡನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.

ಬಾಲಿವುಡ್ ನ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ರವೀನಾ, ಕನ್ನಡ, ತೆಲುಗು ಸೇರಿದಂತೆ ಹಲವು ಪ್ರಾದೇಶಿಕ ಭಾಷೆಯ ಸಿನೆಮಾಗಳಲ್ಲಿಯೂ ಅಭಿನಯಿಸಿದ್ದಾರೆ. ತಮ್ಮ ಸಾಕುಪುತ್ರಿಯ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಮುಂಬೈನಲ್ಲಿ ವಿವಾಹ ಮಹೋತ್ಸವದ ಪಾರ್ಟಿ ನಡೆಯಲಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...