alex Certify
ಕನ್ನಡ ದುನಿಯಾ       Mobile App
       

Kannada Duniya

ರಶ್ಮಿಕಾ ‘ಕಿರಿಕ್’ ಹೇಳಿಕೆಗೆ ಯಶ್ ಫ್ಯಾನ್ಸ್ ಗರಂ

rshimka-yash

ನಟಿ ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ರಾಕಿಂಗ್ ಸ್ಟಾರ್ ಯಶ್ ಕುರಿತು ನೀಡಿದ ಹೇಳಿಕೆಗೆ ಅಭಿಮಾನಿಗಳು ಗರಂ ಆಗಿದ್ದಾರೆ.

‘ಕಿರಿಕ್ ಪಾರ್ಟಿ’ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರಕ್ಷಿತ್ ಶೆಟ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಇನ್ನೂ 2 ನೇ ಸಿನಿಮಾ ಪೂರ್ಣಗೊಳಿಸಿಲ್ಲ. ಅವರು ಯಶ್ ಕುರಿತಾಗಿ ಕಿರಿಕ್ ಕಾಮೆಂಟ್ ಮಾಡಿದ್ದಾರೆ ಎನ್ನಲಾಗಿದೆ.

ಸಂದರ್ಶನವೊಂದರಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಪಾಲ್ಗೊಂಡಿದ್ದು, ಅಲ್ಲಿ ಎದುರಾದ ಮಿಸ್ಟರ್ ಶೋ ಆಫ್ ಯಾರು ಎಂಬ ಪ್ರಶ್ನೆಗೆ ಯಶ್ ಎಂದು ಉತ್ತರಿಸಿದ್ದಾರೆ.

ಯಾವ ನಟ ಮಿಸ್ಟರ್ ಶೋ ಆಫ್ ಎಂದು ಕೇಳಲಾದ ಪ್ರಶ್ನೆಗೆ ರಶ್ಮಿಕಾ, ಯಶ್ ಎಂದು ಹೇಳಿದ್ದು, ಇದಕ್ಕೆ ಯಶ್ ಫ್ಯಾನ್ಸ್ ಮಾತ್ರವಲ್ಲ, ನಿರ್ದೇಶಕ ಸಂತೋಷ್ ಆನಂದರಾಮನ್ ಕೂಡ ಗರಂ ಆಗಿದ್ದಾರೆ.

‘ಯಶ್ ಅವರಿಂದಾಗಿ ಅನೇಕ ನಿರ್ದೇಶಕರು, ಕಲಾವಿದರು ಬೆಳಕಿಗೆ ಬಂದಿದ್ದಾರೆ. ಕನ್ನಡದ ಮಾರುಕಟ್ಟೆ ವಿಸ್ತಾರವಾಗಿದೆ. ಯಾರಲ್ಲಿ ಸೌಂಡು ಮಾಡೋದು’ ಎಂದು ಸಂತೋಷ್ ಆನಂದ ರಾಮನ್ ಹೇಳಿದ್ದಾರೆ.

ಇನ್ನು ಯಶ್ ಫ್ಯಾನ್ಸ್ ‘ಯಶ್ ಶೋ ಆಫ್ ಅಲ್ಲ, ಅವರು ಶೋ ಮ್ಯಾನ್’ ಎಂದು ರಶ್ಮಿಕಾಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಯಶ್ ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...