alex Certify
ಕನ್ನಡ ದುನಿಯಾ       Mobile App
       

Kannada Duniya

ರೂಮರ್ಸ್ ಗಳಿಗೆಲ್ಲಾ ನಕ್ಕು ಸುಮ್ಮನಾಯ್ತಂತೆ ಕಿರಿಕ್ ಜೋಡಿ

ನಟಿ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ನ ಗೀತಾ ಗೋವಿಂದ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಇದರ ನಡುವೆ ರಶ್ಮಿಕಾ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆಯೊಂದು ಅವರನ್ನು ಹಿಂಬಾಲಿಸುತ್ತಲೇ ಇದೆ.

ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ನಡುವೆ ಬ್ರೇಕ್ ಅಪ್ ಆಗಿದೆ, ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಅಂತ ಸುದ್ದಿ ಕಿರಿಕ್ ನಟಿಗೆ ಭಾರೀ ತಲೆನೋವಾಗಿಬಿಟ್ಟಿದೆ. ಈಗ ರಶ್ಮಿಕಾ ಆ ರೂಮರ್ಸ್ ಗಳಿಗೆಲ್ಲಾ ಬ್ರೇಕ್ ಹಾಕಿದ್ದಾರೆ.

ತಮ್ಮಿಬ್ಬರ ಮಧ್ಯೆ ಬ್ರೇಕ್ ಅಪ್ ಆಗಿದೆ ಅನ್ನೋ ಸುದ್ದಿ ಕೇಳ್ತಿದ್ದ ಹಾಗೆ ರಕ್ಷಿತ್ ಶೆಟ್ಟಿ ತುಂಬಾ ನಕ್ಕುಬಿಟ್ಟರಂತೆ. ನಾವಿಬ್ಬರು ತುಂಬಾ ಖುಷಿಯಾಗಿದ್ದೇವೆ. ಇಬ್ಬರು ಒಟ್ಟಿಗೆ ತುಂಬಾ ಸಮಯ ಕಳೆಯೋಕೆ ಆಗ್ತಿಲ್ಲ. ಎಂಗೇಜ್ ಮೆಂಟ್ ಗೆ ಮೊದಲಿನಿಂದಲೂ ಎರಡು ವರ್ಷ ಮದುವೆ ಇಲ್ಲ ಅನ್ನೋ ಪ್ಲಾನ್ ಇತ್ತು.

ಇಬ್ಬರು ಕೂಡ ಒಂದಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇವೆ. ಅದರ ಹೊರತಾಗಿ ನಮ್ಮ ನಡುವೆ ಬ್ರೇಕ್ ಅಪ್ ಆಗಿದೆ ಅನ್ನೋದು ಕೇವಲ ಗಾಸಿಪ್ ಅಷ್ಟೇ ಎಂದಿದ್ದಾರೆ ಕಿರಿಕ್ ನಟಿ. ಈ ಮೂಲಕ ರಶ್ಮಿಕಾ ಗಾಸಿಪ್ ಹರಡುವವರಿಗೆಲ್ಲಾ ಸರಿಯಾಗಿ ಉತ್ತರ ಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...