alex Certify
ಕನ್ನಡ ದುನಿಯಾ       Mobile App
       

Kannada Duniya

‘ಪೊಗರು’ ಚಿತ್ರಕ್ಕೆ ಇಷ್ಟು ಸಂಭಾವನೆ ಪಡೆದಿದ್ದಾರಾ ನಟಿ ರಶ್ಮಿಕಾ…?

ಕನ್ನಡತಿ ರಶ್ಮಿಕಾ ಈಗ ದಕ್ಷಿಣ ಭಾರತದ ಬಹುತೇಕ ಟಾಪ್ ಹೀರೋಗಳ ಜೊತೆ ನಟಿಸಿದ್ದಾರೆ. ನಟ ರಕ್ಷಿತ್ ಶೆಟ್ಟಿ ಜೊತೆ ಕಿರಿಕ್ ಪಾರ್ಟಿ ಮೂಲಕ ವೃತ್ತಿ ಜೀವನ ಆರಂಭಿಸಿದ ರಶ್ಮಿಕಾ ಮಂದಣ್ಣ, ಬಳಿಕ ಪುನೀತ್ ರಾಜಕುಮಾರ್, ಗಣೇಶ್, ವಿಜಯ್ ದೇವರಕೊಂಡ, ನಾಗಾರ್ಜುನ, ನಾನಿ ಮೊದಲಾದವರ ಜೊತೆ ಅಭಿನಯಿಸಿದ್ದಾರೆ.

ಖ್ಯಾತ ಬಾಲಿವುಡ್ ನಟ ಪ್ರಿನ್ಸ್ ಮಹೇಶ್ ಬಾಬು ಹಾಗೂ ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ಅವರುಗಳ ಮುಂದಿನ ಚಿತ್ರಕ್ಕೂ ರಶ್ಮಿಕಾ ಅವರೇ ನಾಯಕಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಮಧ್ಯೆ ಅವರು ನಂದಕಿಶೋರ್ ನಿರ್ದೇಶನದ ‘ಪೊಗರು’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಪೊಗರು’ ಚಿತ್ರದಲ್ಲಿ ಧ್ರುವ ಸರ್ಜಾ ನಾಯಕ ನಟನಾಗಿದ್ದು, ಈ ಚಿತ್ರವನ್ನು ಗಂಗಾಧರ್ ನಿರ್ಮಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಬರೋಬ್ಬರಿ 64 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿದ್ದು, ಒಂದೊಮ್ಮೆ ಇದು ನಿಜವಾದರೆ ರಶ್ಮಿಕಾ ಅತ್ಯಧಿಕ ಸಂಭಾವನೆ ಪಡೆದ ನಾಯಕಿಯರ ಪಟ್ಟಿಯಲ್ಲಿ ಮೊದಲಿಗರಾಗಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...