alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಕಪ್ ವಿಚಾರ: ಕೊನೆಗೂ ಮೌನ ಮುರಿದ ರಶ್ಮಿಕಾ

ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ನಡುವಿನ ಬ್ರೇಕಪ್ ವಿಚಾರಕ್ಕೆ ಸಂಬಂಧಿಸಿದಂತೆ ಇಷ್ಟು ದಿನ ಮೌನವಾಗಿದ್ದ ನಟಿ ರಶ್ಮಿಕಾ ಮಂದಣ್ಣ, ಈಗ ಮೌನ ಮುರಿದಿದ್ದು, ಫೇಸ್ ಬುಕ್ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಎಲ್ಲಾ ಟ್ರೋಲಿಗರಿಗೆ, ಕಮೆಂಟ್ ಮಾಡುವವರಿಗೆ ಉತ್ತರ ನೀಡಿರುವ ರಶ್ಮಿಕಾ, ನಾನು ಹಲವು ದಿನಗಳಿಂದ ಗಮನಿಸುತ್ತಲೇ ಇದ್ದೇನೆ. ಆಪಾದನೆಗಳನ್ನು ನಾನು ಸೈಲೆಂಟ್ ಆಗಿ ಗಮನಿಸುತ್ತಿದ್ದೇನೆ. ಇದು ನನ್ನನ್ನು ತುಂಬಾ ಡಿಸ್ಟರ್ಬ್ ಮಾಡುತ್ತಿದೆ. ಹಾಗಂತ ನಾನು ನಿಮ್ಮನ್ನು ದೂರುವುದಿಲ್ಲ. ನೀವು ಇದನ್ನೇ ನಂಬುತ್ತೀರಾ ಎಂದು ತಿಳಿಸಿದ್ದಾರೆ.

ಈ ರೀತಿಯ ವಿಷಯಗಳಿಗೆ ಸಂಬಂಧಿಸಿದಂತೆ ರಕ್ಷಿತ್ ಅಥವಾ ಚಿತ್ರರಂಗದಲ್ಲಿರುವ ಬೇರೆ ಯಾವುದೇ ವ್ಯಕ್ತಿಗಾಗಲಿ ಸಮಸ್ಯೆಯಾಗಬಾರದು. ಪ್ರತಿಯೊಂದು ನಾಣ್ಯಕ್ಕೆ ಎರಡು ಮುಖಗಳು ಇರುತ್ತವೆ. ಹಾಗೆಯೇ ಪ್ರತಿಯೊಂದು ಕತೆಗೂ ಇನ್ನೊಂದು ಆಯಾಮಗಳೂ ಇರುತ್ತವೆ. ನಮಗೆ ನೆಮ್ಮದಿಯಿಂದ ಕೆಲಸ ಮಾಡಲು ಬಿಡಿ. ನಾನು ಮತ್ತೆ ಕನ್ನಡ ಚಿತ್ರದಲ್ಲಿಯೂ ಅಭಿನಯಿಸುತ್ತೇನೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...