alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಬಾರಿಗೆ ಭೂತದ ಕೋಲದಲ್ಲಿ ರಶ್ಮಿಕಾ ಭಾಗಿ

‘ಕಿರಿಕ್ ಪಾರ್ಟಿ’ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ರಕ್ಷಿತ್ ಶೆಟ್ಟಿ ಅವರು ನಿಜ ಜೀವನದಲ್ಲಿಯೂ ಜೊತೆಯಾಗಲಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ರಶ್ಮಿಕಾ ಅವರು ತುಳುನಾಡಿನ ಭೂತದ ಕೋಲ ಆರಾಧನೆಯಲ್ಲಿ ಪಾಲ್ಗೊಂಡಿದ್ದಾರೆ.

ಕೊಡಗಿನ ಮತ್ತು ತುಳುನಾಡಿನ ಆಚರಣೆಗಳು ಭಿನ್ನವಾಗಿವೆ. ರಶ್ಮಿಕಾ ಅವರು ಭೂತದ ಕೋಲ ಆರಾಧನೆಯಲ್ಲಿ ರಕ್ಷಿತ್ ಶೆಟ್ಟಿ ಅವರೊಂದಿಗೆ ಪಾಲ್ಗೊಂಡಿದ್ದಾರೆ. ಮೊದಲ ಬಾರಿಗೆ ಭೂತದ ಕೋಲದಲ್ಲಿ ಪಾಲ್ಗೊಂಡಿದ್ದಾಗಿ ಅವರು ಹೇಳಿದ್ದಾರೆ.

ಭೂತದ ಕೋಲ ಭಕ್ತಿ ಮತ್ತು ನಂಬಿಕೆಯ ಆಚರಣೆಯಾಗಿದೆ. ನೋಡಲು ಆಕರ್ಷಕವಾಗಿದೆ. ಕೊಡಗಿನಲ್ಲಿ ದೈವ ಬಪ್ಪ ಆಚರಣೆ ಇದೆ ಎಂದು ತಿಳಿಸಿದ್ದಾರೆ. ನಮ್ಮ ಸಂಸ್ಕೃತಿ, ಆಚರಣೆಗಳು ಸಮನಾಗಿವೆ ಎಂದು ಹೇಳಿದ್ದು, ಭೂತದ ಕೋಲದಲ್ಲಿ ಪಾಲ್ಗೊಂಡ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...