alex Certify
ಕನ್ನಡ ದುನಿಯಾ       Mobile App
       

Kannada Duniya

‘ರಾಜರಥ’ ವಿವಾದ: ಕ್ಷಮೆ ಯಾಚಿಸಿದ Rapid ರಶ್ಮಿ

ಕನ್ನಡಿಗರ ಕುರಿತಾಗಿ ಸಲ್ಲದ ಹೇಳಿಕೆ ನೀಡಿದ್ದ ‘ರಾಜರಥ’ ಚಿತ್ರತಂಡ ಕ್ಷಮೆ ಕೋರಿದೆ. ಆರ್.ಜೆ. ರ್ಯಾಪಿಡ್ ರಶ್ಮಿ ಅವರ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ‘ರಾಜರಥ’ ಸಿನಿಮಾ ನೋಡದವರ ಕುರಿತಾಗಿ ಚಿತ್ರದ ನಿರ್ದೇಶಕ, ನಟ ಮತ್ತು ನಟಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.

ಇದು ತೀವ್ರ ವಿವಾದಕ್ಕೆ ಕಾರಣವಾಗಿ ‘ರಾಜರಥ’ ಚಿತ್ರದ ನಿರೂಪ್ ಭಂಡಾರಿ, ಅನೂಪ್ ಭಂಡಾರಿ ಅವರ ವಿರುದ್ಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ದೂರು ನೀಡಿದ್ದರು. ಫಿಲ್ಮ್ ಚೇಂಬರ್ ಗೂ ದೂರು ನೀಡಲಾಗಿತ್ತು.

ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ. ರಾ. ಗೋವಿಂದು ನೇತೃತ್ವದಲ್ಲಿ ಸಭೆ ನಡೆಸಿದ್ದು, ನಿರೂಪ್ ಭಂಡಾರಿ ಮತ್ತು ಅನೂಪ್ ಭಂಡಾರಿ ಕ್ಷಮೆಯಾಚಿಸಿದ್ದರು.

‘ರಾಜರಥ’ ಸಿನಿಮಾ ನೋಡದವರು …. ಎಂದು ಪ್ರಶ್ನೆ ಕೇಳಿದ್ದ ರ್ಯಾಪಿಡ್ ರಶ್ಮಿ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡ ಪ್ರೇಕ್ಷಕರ ಕುರಿತು ನಿಂದನೆಯ ಮಾತುಗಳನ್ನಾಡಿದಾಗ, ನೀವು ತಡೆಯಬಹುದಿತ್ತು ಎಂದು ರಶ್ಮಿ ಅವರಿಗೆ ಹೇಳಲಾಗಿತ್ತು.

ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಅವರನ್ನು ಭೇಟಿ ಮಾಡಿದ ರ್ಯಾಪಿಡ್ ರಶ್ಮಿ, ಕನ್ನಡಿಗರಿಗೆ ಕೈ ಮುಗಿದು ಕ್ಷಮೆ ಯಾಚಿಸಿದ್ದಾರೆ. ತಮ್ಮಿಂದ ತಪ್ಪಾಗಿದೆ ಕ್ಷಮಿಸಿ. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುತ್ತೇನೆ ಎಂದು ತಿಳಿಸಿದ್ದಾರೆ. ಸಾ.ರಾ. ಗೋವಿಂದು ಅವರು, ಇದೊಂದು ಸಲ ಮನ್ನಿಸುವಂತೆ ಹೇಳಿದ್ದಾರೆ.

 

.

ಕರ್ನಾಟಕ ಚಲನಚಿತ್ರ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಸಾರ ಗೋವಿಂದ್ ಅವರನ್ನು ಇಂದು ಭೇಟಿ ಮಾಡಿ ರಾಜರಥ ಸಿನಿಮಾ ಪ್ರಚಾರದ ವೇಳೆ ನಮ್ಮ ಕಾರ್ಯಕ್ರಮದಲ್ಲಿ ರಾಜರಥ ಸಿನಿಮಾ ತಂಡದಿಂದ ನಡೆದ ಅಚಾತುರ್ಯದ ವಿವರಣೆ ಕೊಟ್ಟಿದ್ದೇವೆ. ನಡೆದ ಘಟನೆ ಬಗ್ಗೆ ನಮಿಗೂ ಬೇಸರವಿದೆ. ಇನ್ನು ಮುಂದೆ ನಮ್ಮ ಶೋ ನ ಮೂಲಕ ಈ ರೀತಿಯ ಘಟನೆ ನಡೆಯದಂತೆ ಎಚ್ಚರ ವಹಿಸುತ್ತೇವೆ.

Posted by RJ Rapid Rashmi on Wednesday, April 4, 2018

Subscribe Newsletter

Get latest updates on your inbox...

Opinion Poll

  • ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಕಾಣಲಿದೆಯಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ?

    View Results

    Loading ... Loading ...