alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ಅಭಿಮಾನಿಗಳ ನೂಕುನುಗ್ಗಲಿನ ಮಧ್ಯೆಯೂ ನಟ ಮಾಡಿದ ಈ ಕೆಲಸ

ಬಾಲಿವುಡ್ ನಟ ರಣವೀರ್ ಸಿಂಗ್ ಇತ್ತೀಚೆಗಷ್ಟೆ ತಮ್ಮ ಫೀಮೇಲ್ ಫ್ಯಾನ್ಸ್ ಒಬ್ಬರ ರಕ್ಷಣೆಗೆ ನಿಂತ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿಬಿಟ್ಟಿದೆ. ಗುರುವಾರದಿಂದ ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋಗೆ ಭಾರೀ ಜನಸ್ಪಂದನೆ ವ್ಯಕ್ತವಾಗಿದೆ.

ಮುಂಬೈನಲ್ಲಿ ಮಳಿಗೆಯೊಂದರ ಉದ್ಘಾಟನೆಗೆ ಆಗಮಿಸಲಿದ್ದ ರಣವೀರ್ ರನ್ನು ನೋಡೋದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳ ಹಿಂಡು ನೆರೆದಿತ್ತು. ಮಳಿಗೆ ಉದ್ಘಾಟನೆಗೆ ಆಗಮಿಸಿದ ರಣವೀರ್ ಮೊದಲು ಕಾರ್ ನ ಟಾಪ್ ಮೇಲೆ ನಿಂತು ಅಭಿಮಾನಿಗಳತ್ತ ಕೈಬೀಸಿ ಅವರಲ್ಲಿ ಪುಳಕವನ್ನುಂಟು ಮಾಡಿದರು.

ಆನಂತರ ಅಲ್ಲಿಂದ ಕೆಳಕ್ಕಿಳಿದು ಮಳಿಗೆ ಉದ್ಘಾಟನೆಗೆ ತೆರಳುವ ವೇಳೆ ಕೆಲ ಮಹಿಳಾ ಅಭಿಮಾನಿಗಳು ತಮ್ಮ ನೆಚ್ಚಿನ ನಟನೊಂದಿಗೆ ಸೆಲ್ಫಿಗೆ ಬೇಡಿಕೆ ಇಟ್ಟರು. ಈ ವೇಳೆ ಅಭಿಮಾನಿಗಳು ರಣವೀರ್ ರನ್ನ ಪ್ರೀತಿಯಿಂದ ಬಾಬಾ ಅಂತ ಕರೆದು ಆ ಕ್ಷಣದ ಕಳೆ ಹೆಚ್ಚಿಸಿದ್ರು. ಮಹಿಳಾ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡದೆ ರಣವೀರ್ ಸೆಲ್ಫಿ ತೆಗೆದುಕೊಳ್ಳೋದಕ್ಕೆ ಮುಂದಾದ್ರು.

ಈ ಸಂದರ್ಭದಲ್ಲಿ ಉಂಟಾದ ನೂಕು ನುಗ್ಗಲಿನಲ್ಲಿ ರಣವೀರ್ ತಮ್ಮ ಇತರೆ ಅಭಿಮಾನಿಗಳ ಆತುರಕ್ಕೆ ಬ್ರೇಕ್ ಹಾಕಿ ಮಹಿಳಾ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಂಡರು. ನೂಕು ನುಗ್ಗಲಿನಿಂದ ಮೈಮೇಲೆ ಬೀಳುತ್ತಿದ್ದವರನ್ನು ನಿಯಂತ್ರಿಸಿ ಯುವತಿಯೊಂದಿಗೆ ಸೆಲ್ಫಿ ತೆಗೆದುಕೊಂಡರು. ಆನಂತರ ಇತರೆ ಅಭಿಮಾನಿಗಳಿಗೂ ಸೆಲ್ಫಿ ತೆಗೆದುಕೊಳ್ಳುವ ಅವಕಾಶ ಮಾಡಿಕೊಟ್ಟರು. ರಣವೀರ್ ರ ಈ ಪ್ರೊಟೆಕ್ಟಿವ್ ನೇಚರ್ ಈಗ ಮಹಿಳಾ ಅಭಿಮಾನಿಗಳಲ್ಲಿ ತಮ್ಮ ನಾಯಕನ ಬಗ್ಗೆ ಇರುವ ಅಭಿಮಾನ ಇಮ್ಮಡಿಗೊಳ್ಳೋದಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...