alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ದೀಪಿಕಾಗೆ ಐ ಲವ್ ಯೂ ಎಂದಿರೋ ಈ ವಿಡಿಯೋ

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಬಾಲಿವುಡ್ ನ ಹಾಟ್ ಕಪಲ್. ಇವರ ರಿಯಲ್ ಲೈಫ್ ಕೆಮೆಸ್ಟ್ರಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದುವರೆಗೂ ರಣವೀರ್ ಆಗ್ಲಿ ದೀಪಿಕಾ ಆಗ್ಲಿ ತಮ್ಮಿಬ್ಬರ ಪ್ರೀತಿ ಬಗ್ಗೆ ಓಪನ್ ಆಗಿ ಹೇಳಿಕೊಂಡಿರಲಿಲ್ಲ.

ವಿಡಿಯೋ ಒಂದರಲ್ಲಿ ರಣವೀರ್ ಸಿಂಗ್, ದೀಪಿಯ ಬಗ್ಗೆ ತಮಗಿರೋ ಪ್ರೀತಿಯನ್ನು ಬಿಚ್ಚಿಟ್ಟಿದ್ದಾರೆ. ಶಾರುಖ್ ಖಾನ್ ರ ‘ಬಾತೇಂ ವಿತ್ ದಿ ಬಾದ್ ಶಾ’ ಕಾರ್ಯಕ್ರಮದಲ್ಲಿ ದೀಪಿಕಾ ಪಾಲ್ಗೊಂಡಿದ್ದರು. ಈ ವೇಳೆ ರಣವೀರ್ ಪ್ರೇಮ ಸಂದೇಶವಿರೋ ವಿಡಿಯೋವನ್ನು ಶಾರುಖ್ ಪ್ರಸಾರ ಮಾಡಿದ್ದಾರೆ.

ಸುಂದರವಾದ ಹಾಡಿನ ಮೂಲಕ ರಣವೀರ್ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ತಮ್ಮ ಬಾಳಲ್ಲಿ ಬೆಳಕು ತಂದವಳು ದೀಪಿಕಾ ಎಂದಿರುವ ರಣವೀರ್, ಐ ಲವ್ ಯೂ ಅಂತಾ ಬಹಿರಂಗವಾಗಿಯೇ ಹೇಳಿದ್ದಾರೆ. ರಣವೀರ್ ಅಭಿಮಾನಿಗಳು ಈ ವಿಡಿಯೋವನ್ನು ಇನ್ ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ಅದು ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...