alex Certify
ಕನ್ನಡ ದುನಿಯಾ       Mobile App
       

Kannada Duniya

ರಣವೀರ್ ಸಿಂಗ್ ಟ್ವೀಟ್‍ ಗೆ ನಾಗ್ಪುರ ಪೊಲೀಸರು ಹೇಳಿದ್ದೇನು ಗೊತ್ತಾ…?

ಬಾಲಿವುಡ್ ನಟ ರಣವೀರ್ ಸಿಂಗ್ ಮಾಡುವ ಕೆಲಸವೆಲ್ಲವೂ ಫಿಲ್ಮಿ ಆಗಿರುತ್ತವೆ. ಅದಕ್ಕಾಗಿ ಅವರನ್ನು ಇಷ್ಟಪಡುವವರು, ಪ್ರೀತಿಸುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಇತ್ತೀಚೆಗೆ ಅವರು ವೋಗ್ ಇಂಡಿಯಾಕ್ಕಾಗಿ ನೀಡಿದ ಫೋಟೋ ಶೂಟ್‍ನಲ್ಲಿ 1999ರ ‘ಹಸೀನಾ ಮಾನ್ ಜಾಯೇಗಿ’ ಚಿತ್ರದ ‘ವಾಟ್ ಈಸ್ ಮೊಬೈಲ್ ನಂ?’ ಹಾಡನ್ನು ಕ್ಯಾಪ್ಶನ್ ಆಗಿ ಬಳಸಿ, ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಾಗ್ಪುರ ಪೊಲೀಸ್ ಇಲಾಖೆ, ಪೊಲೀಸ್ ಸಹಾಯವಾಣಿ ಸಂಖ್ಯೆ 100ನ್ನು ಹಂಚಿಕೊಂಡಿದ್ದಾರೆ. ಜತೆಗೆ ಕೆಂಪು ಬಣ್ಣದ ಟೆಲಿಫೋನ್ ಐಕಾನ್ ಸೇರಿಸಿದ್ದಾರೆ.

ಇತ್ತೀಚೆಗೆ ನಾಗ್ಪುರ ಪೊಲೀಸರು ಚಂದ್ರಯಾನ-2 ಕುರಿತು ಮಾಡಿದ್ದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಮೆಚ್ಚುಗೆ ಗಳಿಸಿತ್ತು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೋಟಾರು ವಾಹನ ಕಾಯಿದೆಗೆ ಚಂದ್ರಯಾನ-2 ಲಿಂಕ್ ಮಾಡಿ ಸೆಪ್ಟೆಂಬರ್ ತಿಂಗಳಲ್ಲಿ ನಾಗ್ಪುರ ಪೊಲೀಸರು ಮಾಡಿರುವ ಟ್ವೀಟ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. “ಪ್ರೀತಿಯ ವಿಕ್ರಮ್, ದಯವಿಟ್ಟು ಪ್ರತಿಕ್ರಿಯೆ ನೀಡು, ಸಂಪರ್ಕ ಕಡಿದುಕೊಂಡಿದ್ದಕ್ಕೆ ನಾವು ನಿನಗೆ ದಂಡ ವಿಧಿಸುವುದಿಲ್ಲ” ಎಂದು ಟ್ವೀಟ್ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...