alex Certify
ಕನ್ನಡ ದುನಿಯಾ       Mobile App
       

Kannada Duniya

ಲಾರ್ಡ್ಸ್‌ ಅಂಗಳದಲ್ಲಿ ಸಚಿನ್ ಜೊತೆ ರಣವೀರ್

ಭಾರತ ಮೊತ್ತ ಮೊದಲ ಬಾರಿಗೆ ಕ್ರಿಕೆಟ್‌ ವಿಶ್ವಕಪ್‌ ಗೆದ್ದ ಕಥೆ ಇದೀಗ ಬಾಲಿವುಡ್‌ ಪರದೆಯ ಮೇಲೆ ಕಾಣಿಸಿಕೊಳ್ಳಲಿದೆ. ಕಪಿಲ್‌ ದೇವ್‌ ಪಾತ್ರದಲ್ಲಿ ನಟ ರಣವೀರ್ ಸಿಂಗ್‌ ಕಾಣಿಸಿಕೊಳ್ಳಲಿದ್ದಾರೆ. ಈ ಸಂಬಂಧ ಲಾರ್ಡ್ಸ್‌ ಮೈದಾನಕ್ಕೆ ತೆರಳಿದ್ದ ರಣವೀರ್ ಸಿಂಗ್‌, ಭಾರತೀಯ ಕ್ರಿಕೆಟ್‌ ಲೋಕದ ದಂತ ಕಥೆ ಸಚಿನ್‌ ತೆಂಡೂಲ್ಕರ್‌ ಅವರನ್ನು ಭೇಟಿಯಾಗಿದ್ದಾರೆ.

ಇದೇ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಆದರೆ ರಣವೀರ್ ಗೆ ಮಳೆಯಿಂದಾಗಿ ಪಂದ್ಯ ನೋಡಲು ಸಾಧ್ಯವಾಗಿಲ್ಲ. 1983 ರಲ್ಲಿ ಲಾರ್ಡ್ಸ್‌ ಮೈದಾನದಲ್ಲಿ ಭಾರತ ವೆಸ್ಟ್‌ ಇಂಡೀಸ್‌ ಎದುರು ವಿಶ್ವಕಪ್‌ ಜಯಿಸಿತ್ತು. ನಿರ್ದೇಶಕ ಕಬೀರ್‌ ಖಾನ್‌ ಸಹ ಸಚಿನ್‌ ಭೇಟಿಯಾಗಿ ಸೆಲ್ಫಿಗೆ ಫೋಸ್‌ ನೀಡಿದ್ದಾರೆ.

1983ರಲ್ಲಿ ಭಾರತ ವಿಶ್ವಕಪ್‌ ಗೆಲ್ಲುವಾಗ ಸಚಿನ್‌ಗೆ ಕೇವಲ 9 ವರ್ಷವಾಗಿತ್ತಂತೆ. ಅಂದು ಕಪಿಲ್‌ ದೇವ್‌ ಆಟ ಹಾಗೂ ವಿಶ್ವಕಪ್‌ ಗೆದ್ದಿರುವುದು ಸಚಿನ್‌ಗೂ ದೇಶಕ್ಕಾಗಿ ಆಟವಾಡಲು ಪ್ರೇರೇಪಣೆಯಾಗಿದೆ. ಇಂದು ಅದೇ ಮೈದಾನದಲ್ಲಿ ಸಚಿನ್‌ ಫೋಟೋಗೆ ಪೋಸ್‌ ಕೊಟ್ಟಿರುವುದು ಹೆಮ್ಮೆಯ ಸಂಗತಿ ಎಂದು ರಣವೀರ್ ಟ್ವಿಟರ್‌ ಹಾಗೂ ಇನ್ನಿತರ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ. ಅಂದ ಹಾಗೆ ಸಿನಿಮಾ ಹೆಸರು ಕೇಳಿದ್ದೀರಾ? ಲಾರ್ಡ್ಸ್‌ ಮೈದಾನದಲ್ಲಿ ವಿಶ್ವಕಪ್ ಗೆದ್ದ ವರ್ಷವನ್ನೇ (83) ಸಿನಿಮಾಕ್ಕೆ ಹೆಸರಿಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...