alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟುಹಬ್ಬದ ದಿನ ಹೊಸ ಕಾರಿನಲ್ಲಿ ಬಾಲಿವುಡ್ ನ ಹಾಟ್ ಕಪಲ್

deepika-ranveer-759

ಬಾಲಿವುಡ್ ನ ಹ್ಯಾಂಡ್ ಸಮ್ ನಟ ರಣವೀರ್ ಸಿಂಗ್ ಗೆ ಇವತ್ತು 31ನೇ ಬರ್ತಡೇ ಸಂಭ್ರಮ. ಈ ಖುಷಿಯನ್ನು ರಣವೀರ್ ತಮ್ಮ ಲೇಡಿ ಲವ್ ದೀಪಿಕಾ ಪಡುಕೋಣೆ ಜೊತೆ ಸೆಲೆಬ್ರೇಟ್ ಮಾಡ್ತಿದ್ದಾರೆ. ಕಳೆದ ರಾತ್ರಿ ಈ ಬಾಜಿರಾವ್ – ಮಸ್ತಾನಿ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದೆ.

ತಾಜ್ ಕೊಲಾಬಾದಲ್ಲಿ ರಣವೀರ್, ದೀಪಿಕಾ ಇಬ್ರೂ ಡಿನ್ನರ್ ಮಾಡಿದ್ದಾರೆ. ವಿಶೇಷ ಅಂದ್ರೆ ರಣವೀರ್, ಹುಟ್ಟುಹಬ್ಬಕ್ಕಾಗಿ ತಮಗೆ ತಾವೇ ಗಿಫ್ಟ್ ಕೊಟ್ಟುಕೊಂಡಿದ್ದಾರೆ. ಅದೇನ್ ಗೊತ್ತಾ? ಬ್ರಾಂಡ್ ನ್ಯೂ ಕಾರ್. ಹೊಚ್ಚ ಹೊಸ ಕಾರಿನಲ್ಲಿ ದೀಪಿಯನ್ನೇ ಮೊದಲ ಬಾರಿಗೆ ಕೂರಿಸಿಕೊಂಡು ರಣವೀರ್ ಲಾಂಗ್ ಡ್ರೈವ್ ಹೋಗಿದ್ದಾರೆ.

ರಣವೀರ್ – ದೀಪಿಕಾ ಲವ್ ಅಫೇರ್ ಸುದ್ದಿ ಹೊಸದೇನಲ್ಲ. ಆದ್ರೆ ಇಬ್ಬರ ಮಧ್ಯೆ ಬ್ರೇಕಪ್ ಆಗಿದೆ ಅನ್ನೋ ಗಾಸಿಪ್ ಕೂಡ ಇತ್ತು. ಆ ಗಾಳಿಸುದ್ದಿಗಳಿಗೆಲ್ಲ ಈ ಫೋಟೋಗಳೇ ಉತ್ತರ ಹೇಳ್ತಿವೆ. ಸಂಜಯ್ ಲೀಲ್ ಭನ್ಸಾಲಿ ಅವರ ‘ಪದ್ಮಾವತಿ’ ಚಿತ್ರದಲ್ಲಿ ದೀಪಿಕಾ ಹಾಗೂ ರಣವೀರ್ ಇಬ್ಬರೂ ನಟಿಸ್ತಿದ್ದಾರೆ. ದೀಪಿಕಾ ಪದ್ಮಿನಿ ಪಾತ್ರ ಮಾಡಿದ್ರೆ, ರಣವೀರ್ ಅಲ್ಲಾವುದ್ದೀನ್ ಖಿಲ್ಜಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...