alex Certify
ಕನ್ನಡ ದುನಿಯಾ       Mobile App
       

Kannada Duniya

10 ಕೋಟಿ ಮೌಲ್ಯದ ಮನೆ ಹಾಗೂ 3 ಕೋಟಿ ಬೆಲೆಯ ಕಾರಿನ ಮಾಲೀಕ ಈ ನಟ

ಬಾಲಿವುಡ್ ನಟ ರಣವೀರ್ ಸಿಂಗ್ ಸದ್ಯ ದೀಪಿಕಾ ಪಡುಕೋಣೆ ಮದುವೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಒಂದಾದ ಮೇಲೆ ಒಂದು ಭರ್ಜರಿ ಹಿಟ್ ಚಿತ್ರಗಳನ್ನು ನೀಡ್ತಿರುವ ರಣವೀರ್, ದೀಪಿಕಾ ಜೊತೆ ಇದೇ ನವೆಂಬರ್ 20 ರಂದು ಇಟಲಿಯಲ್ಲಿ ಮದುವೆಯಾಗಲಿದ್ದಾರಂತೆ. ಅದೇನೇ ಇರಲಿ ದೀಪಿ ಆಯ್ಕೆ ಮಾಡಿಕೊಂಡಿರುವ ಗಂಡು ಐಷಾರಾಮಿ ವಿಚಾರದಲ್ಲಿ ಕಡಿಮೆಯೇನು ಇಲ್ಲ.

2010ರಲ್ಲಿ ಬ್ಯಾಂಡ್ ಬಾಜಾ ಬಾರಾತ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶ ಮಾಡಿರುವ ರಣವೀರ್ ಸಿಂಗ್ ಕೆಲ ದಿನಗಳ ಹಿಂದಷ್ಟೇ ಮುಂಬೈನಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿ ಮಾಡಿದ್ದಾರೆ. ರಣವೀರ್ ಬಳಿ ದುಬಾರಿ ಬೆಲೆಯ ಸಾಕಷ್ಟು ಕಾರುಗಳಿವೆ.

ಪದ್ಮಾವತ್ ಚಿತ್ರ ಬಿಡುಗಡೆ ನಂತ್ರ ರಣವೀರ್ ಬಾಂದ್ರಾ ಪ್ರದೇಶದಲ್ಲಿರುವ ಶ್ರೀ ಅಪಾರ್ಟ್ಮೆಂಟ್ ನಲ್ಲಿ ಹೊಸ ಮನೆ ಖರೀದಿ ಮಾಡಿದ್ದಾರೆ. ಅಪಾರ್ಟ್ಮೆಂಟ್ ನ 6,7 ಹಾಗೂ 8ನೇ ಮಹಡಿಯಲ್ಲಿ ರಣವೀರ್ ವಾಸವಾಗಿದ್ದಾರೆ. ರಣವೀರ್ ಈಗ 4ನೇ ಮಹಡಿಯನ್ನೂ ಖರೀದಿ ಮಾಡಿದ್ದಾರಂತೆ. ಇದ್ರ ಬೆಲೆ 8 ರಿಂದ 10 ಕೋಟಿ ರೂಪಾಯಿ ಎನ್ನಲಾಗ್ತಿದೆ.

ರಣವೀರ್ ಬಳಿ ದುಬಾರಿ ಕಾರುಗಳಿವೆ, ರಣವೀರ್ ಬಳಿ Mercedes-Benz GL-Class SUV ಕಾರಿದೆ. ಇದ್ರ ಬೆಲೆ 2 ರಿಂದ 3 ಕೋಟಿ ರೂಪಾಯಿ. Jaguar XJL Mercedes Benz ಜೊತೆ 1 ಕೋಟಿ ಮೌಲ್ಯದ ಜಾಗ್ವಾರ್ ಕಾರನ್ನು ರಣವೀರ್ ಹೊಂದಿದ್ದಾರೆ. ರಣವೀರ್ ಬಳಿ ಕಪ್ಪು ಬಣ್ಣದ Toyota Land Cruiser Prado ಕಾರಿದೆ. ಇದ್ರ ಬೆಲೆ 93 ಲಕ್ಷ ರೂಪಾಯಿ. ರಣವೀರ್ ಜಿಮ್ ಗೆ ಹೋಗುವ ವೇಳೆ ಈ ಕಾರ್ ಬಳಸ್ತಾರೆ. ರಣವೀರ್ ಮೂರು ಕಾರಿಗೆ ಒಂದೇ ನಂಬರ್ ಪ್ಲೇಟ್ ಹಾಕಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...