alex Certify
ಕನ್ನಡ ದುನಿಯಾ       Mobile App
       

Kannada Duniya

ರಣವೀರ್ ಮನೆಯಲ್ಲಿ ಶುರುವಾಗಿದೆ ಮದುವೆ ಶಾಸ್ತ್ರ

ಬಾಲಿವುಡ್ ಸೂಪರ್ ಸ್ಟಾರ್ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಮನೆಯಲ್ಲಿ ಮದುವೆ ಕಾರ್ಯಕ್ರಮಗಳು ಶುರುವಾಗಿವೆ. ದೀಪಿಕಾ ಪಡುಕೋಣೆ ನಂದಿ ಪೂಜೆ ಮಾಡಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗ ರಣವೀರ್ ಸಿಂಗ್ ಮನೆಯ ಫೋಟೋಗಳು ವೈರಲ್ ಆಗಿವೆ.

ರಣವೀರ್ ಸಿಂಗ್ ಮನೆಯಲ್ಲಿ ಅರಿಶಿಣದ ಶಾಸ್ತ್ರ ನಡೆದಿದೆ. ಪಂಜಾಬಿ ಸಂಪ್ರದಾಯದಂತೆ ಅರಿಶಿನ ಶಾಸ್ತ್ರ ನಡೆದಿದೆ. ಮನೆ ಮೇಲೆ ಸಂಬಂಧಿಕರ ಜೊತೆ ನಿಂತಿರುವ ರಣವೀರ್ ಫೋಟೋ ವೈರಲ್ ಆಗಿದೆ. ಬಿಳಿ ಬಣ್ಣದ ಕುರ್ತಾ ಧರಿಸಿರುವ ರಣವೀರ್ ಕೆನ್ನೆಗೆ ಅರಿಶಿನವಿದೆ. ಫೋಟೋದಲ್ಲಿ ರಣವೀರ್ ತುಂಬಾ ಖುಷಿಯಾಗಿರುವುದು ಸ್ಪಷ್ಟವಾಗಿ ಕಾಣ್ತಿದೆ.

ನವೆಂಬರ್ 14 ಮತ್ತು 15 ರಂದು ಮದುವೆ ಕಾರ್ಯಕ್ರಮಗಳು ನಡೆಯಲಿವೆ. ಮದುವೆ ದಿನಾಂಕವನ್ನು ದೀಪಿಕಾ-ರಣವೀರ್ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದಾರೆ. ಆದ್ರೆ ಮದುವೆ ಎಲ್ಲಿ ಎಂಬುದನ್ನು ಮಾತ್ರ ಹೇಳಿಲ್ಲ. ಇಟಲಿಯಲ್ಲಿ ಮದುವೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...