alex Certify
ಕನ್ನಡ ದುನಿಯಾ       Mobile App
       

Kannada Duniya

ಭಾವಿ ಸೊಸೆ ದೀಪಿಗೆ ರಣವೀರ್ ಪಾಲಕರು ನೀಡಿದ್ರು ದೊಡ್ಡ ಉಡುಗೊರೆ

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜನವರಿ 6ರಂದು ಶ್ರೀಲಂಕಾದಿಂದ ಭಾರತಕ್ಕೆ ವಾಪಸ್ ಆಗಿದ್ದಾರೆ. ಜನವರಿ 5ರಂದು ದೀಪಿಕಾ ಪಡುಕೋಣೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ. ಇದೇ ದಿನ ಇಬ್ಬರೂ ಎಂಗೇಜ್ ಆಗಲಿದ್ದಾರೆ. ಇದಕ್ಕಾಗಿ ಇಬ್ಬರ ಕುಟುಂಬ ಕೂಡ ಶ್ರೀಲಂಕಾಕ್ಕೆ ಹೋಗಿದೆ ಎನ್ನುವ ಸುದ್ದಿಯಿತ್ತು. ಸದ್ಯ ದೀಪಿ-ರಣವೀರ್ ಎಂಗೇಜ್ಮೆಂಟ್ ಮಾಡಿಕೊಂಡಿಲ್ಲ. ಆದ್ರೆ ರಣವೀರ್ ಸಿಂಗ್ ಕುಟುಂಬದಿಂದ ದೀಪಿಕಾಗೆ ಭರ್ಜರಿ ಉಡುಗೊರೆಯೊಂದು ಸಿಕ್ಕಿದೆ.

ಯಸ್, ರಣವೀರ್ ಸಿಂಗ್ ತಂದೆ-ತಾಯಿ ದೀಪಿಕಾಗೆ ಡೈಮಂಡ್ ಸೆಟ್ ನೀಡಿದ್ದಾರಂತೆ. ಜೊತೆಗೆ ಸವ್ಯಸಾಚಿ ಮುಖರ್ಜಿ ಸೀರೆಯನ್ನು ಗಿಫ್ಟ್ ಆಗಿ ನೀಡಿದ್ದಾರಂತೆ. ಬಾಯ್ ಫ್ರೆಂಡ್ ಪಾಲಕರಿಂದ ಗಿಫ್ಟ್ ಪಡೆದಿರುವ ದೀಪಿಕಾ ತುಂಬಾ ಖುಷಿಯಾಗಿದ್ದಾಳೆ.

ದೀಪಿಕಾ ಪಡುಕೋಣೆ ಆಯ್ಕೆಗೆ ಈಗಾಗಲೇ ತಂದೆ ಪ್ರಕಾಶ್ ಪಡುಕೋಣೆ ಒಪ್ಪಿಗೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪ್ರಕಾಶ್, ತಂದೆಯಾಗಿ ನಾನು ಮಗಳಿಗೆ ಸ್ವಾತಂತ್ರ್ಯ ನೀಡಿದ್ದೇನೆ. ಮದುವೆ ವಿಷ್ಯವಿರಲಿ ಇಲ್ಲ ಬೇರೆ ಯಾವುದೇ ಸಂಗತಿಯಿರಲಿ ಆಕೆಯದ್ದೇ ಅಂತಿಮ ನಿರ್ಧಾರವೆಂದು ಅವರು ಹೇಳಿದ್ದರು. ದೀಪಿಕಾ ಹಾಗೂ ರಣವೀರ್ ಇಬ್ಬರ ಪಾಲಕರು ಮದುವೆಗೆ ಒಪ್ಪಿಗೆ ನೀಡಿಯಾಗಿದೆ. ಆದ್ರೆ ಜೋಡಿ ಯಾವಾಗ ಹಸೆಮಣೆ ಏರುತ್ತಾರೆಂಬುದನ್ನು ಕಾದು ನೋಡಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...