alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ ಜೊತೆ ರಣವೀರ್ ಸಿಂಗ್ ಸೆಲ್ಫಿ

‘ಬ್ಯಾಂಡ್ ಬಾಜಾ ಬಾರಾತ್’ ಚಿತ್ರದಲ್ಲಿ ರಣವೀರ್ ಗೆ ಜೋಡಿಯಾಗಿದ್ದ ಅನುಷ್ಕಾ ಶರ್ಮಾ ವಾರದ ಹಿಂದಷ್ಟೆ ವಿರಾಟ್ ಕೊಹ್ಲಿ ಜೊತೆಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಈಗ ಬಹುಷಃ ನಟ ರಣವೀರ್ ಸಿಂಗ್ ಸರದಿ. ದೀಪಿಕಾ ಹಾಗೂ ರಣವೀರ್ ಡೇಟಿಂಗ್ ಮಾಡ್ತಿರೋದು ಎಲ್ರಿಗೂ ಗೊತ್ತೇ ಇದೆ.

ಇದೀಗ ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ ಅವರ ಜೊತೆಗೆ ರಣವೀರ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿರುವ ‘ಪಡುಕೋಣೆ-ದಾವಿಡ್ ಸೆಂಟರ್ ಫಾರ್ ಎಕ್ಸಲೆನ್ಸ್’ ನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಅಲ್ಲಿಗೆ ಆಗಮಿಸಿದ್ದ ರಣವೀರ್, ಪ್ರಕಾಶ್ ಪಡುಕೋಣೆ ಅವರನ್ನು ಭೇಟಿಯಾಗಿದ್ದಾರೆ.

ರಾಹುಲ್ ದ್ರಾವಿಡ್, ಅಭಿನವ್ ಬಿಂದ್ರಾ, ಗೀತ್ ಸೇಥಿ, ಹಾಗೂ ವಿಶ್ವನಾಥನ್ ಆನಂದ್ ಕೂಡ ಸಮಾರಂಭದಲ್ಲಿದ್ರು. ರಣವೀರ್, ದೀಪಿಕಾ ತಂದೆ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ಇನ್ ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿರೋದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...