alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಟ ಧರಿಸಿರುವ ವಿಶಿಷ್ಟ ಉಡುಪಿನ ಬೆಲೆ ಕೇಳಿದ್ರೇ….

ನಟ ರಣವೀರ್ ಸಿಂಗ್ ಎಂದ ಕೂಡಲೇ ಕಣ್ಣ ಮುಂದೆ ಬರುವುದು ಅವರ ವಿಭಿನ್ನವಾದ ಸ್ಟೈಲ್ ಹಾಗೂ ಗಾಢವಾದ ಉಡುಪು. ಚುರುಕು ಕಣ್ಣಿನ ಈ ನಟ ಬಿ-ಟೌನ್ ನಲ್ಲಿ ತನ್ನ ಸ್ಟೈಲ್ ಮೂಲಕವೇ ಎಲ್ಲರ ಕಣ್ಮನ ಸೆಳೆದಿದ್ದಾರೆ. ಈಗಲೂ ಹೊಸ ಹಾಗೂ ವಿಭಿನ್ನವಾದ ಲುಕ್ ನಿಂದ ರಣವೀರ್ ಮತ್ತೆ ಸುದ್ದಿಯಲ್ಲಿದ್ದಾರೆ.

ರಣವೀರ್ ಲುಕ್ ಯಾವಾಗಲೂ ಇತರರಿಗಿಂತ ಭಿನ್ನವಾಗಿರುತ್ತೆ. ಹಾಗಾಗಿ ಇವರನ್ನು ಸ್ಟೈಲ್ ರಾಜಾ ಎಂದೇ ಹೇಳಬಹುದು. ಇತ್ತೀಚೆಗೆ Versace ಅವರ ವಿಭಿನ್ನ ವಿನ್ಯಾಸದ ದಿರಿಸನ್ನು ಧರಿಸುವ ಮೂಲಕ ರಣವೀರ್ ಮತ್ತೊಮ್ಮೆ ತಮ್ಮ ಫ್ಯಾಷನ್ ಪ್ರೀತಿಯನ್ನು ಅನಾವರಣ ಮಾಡಿದ್ದಾರೆ. ಅಂದ ಹಾಗೇ Versace ಅವರ ಈ ವಿನ್ಯಾಸದ ಉಡುಗೆಯನ್ನು ಧರಿಸಿದ ಜಗತ್ತಿನ ಮೂರನೇ ಸೆಲಿಬ್ರಿಟಿಯಂತೆ ರಣವೀರ್.

Versace ನ ರೇಷ್ಮೆ ಶರ್ಟ್ ಹಾಗೂ ಪ್ರಿಂಟೆಂಡ್ ಡೆನಿಮ್ ಜಾಕೆಟ್ ಧರಿಸಿ ರಣವೀರ್ ಸಖತ್ ಸ್ಟೈಲಿಷ್ ಆಗಿ ಮಿಂಚಿದರು. ರಣವೀರ್ ಅವರ ಸ್ಟೈಲಿಷ್ ನಿತಾಶ ಗೌರವ್ ಅವರ ಪ್ರಕಾರ Versace ನವರ ಈ ವಿಶೇಷ ಶ್ರೇಣಿಯ ದಿರಿಸನ್ನು ಧರಿಸಿದ ಮೂರನೇ ಸೆಲೆಬ್ರಿಟಿ ರಣವೀರ್ ಅಂತೆ. ಡಿಜೆ ಖಲೀದ್ ಹಾಗೂ ಬೆಯೋನ್ಸ್ ಮೊದಲಿಗರಂತೆ. ಅಂದ ಹಾಗೇ, ರಣವೀರ್ ಧರಿಸಿದ ಈ ಉಡುಪಿನ ಬೆಲೆ ಕೇಳಿದ್ರೆ ತಲೆ ತಿರುಗುವುದಂತೂ ಗ್ಯಾರಂಟಿ. ಯಾಕೆಂದ್ರೆ ಇದರ ಬೆಲೆ 2,80,000 ರೂ. ಅಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...