alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದಿನ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾಳೆ ಬಾಲಿವುಡ್ ಬ್ಯೂಟಿ

ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಇದೇ ವರ್ಷ ಮದುವೆಯಾಗ್ತಿದ್ದಾರೆ. ಅನೇಕ ದಿನಗಳಿಂದ ಈ ಸುದ್ದಿ ಹರಿದಾಡ್ತಿದೆ. ಆದ್ರೆ ಅಧಿಕೃತವಾಗಿ ಯಾವುದೇ ದಿನಾಂಕ ಹೊರ ಬಿದ್ದಿಲ್ಲ. ಈಗ ದೀಪಿಕಾ ಮದುವೆಯ ಇನ್ನೊಂದು ದಿನಾಂಕ ಹೊರಬಿದ್ದಿದೆ.

ಮೂಲಗಳ ಪ್ರಕಾರ ದೀಪಿಕಾ ನವೆಂಬರ್ 20 ರಂದು ರಣವೀರ್ ಕೈ ಹಿಡಿಯಲಿದ್ದಾಳಂತೆ. ಇದು ಕನ್ಫರ್ಮ್ ಎಂದು ಮೂಲಗಳು ಹೇಳಿವೆ. ಈ ಹಿಂದೆ ದೀಪಿ-ರಣವೀರ್ ನವೆಂಬರ್ 19 ರಂದು ಇಲ್ಲ ನವೆಂಬರ್ 10 ರಂದು ಮದುವೆಯಾಗ್ತಾರೆ ಎನ್ನಲಾಗ್ತಾಯಿತ್ತು. ಆದ್ರೀಗ 20ರಂದು ಮದುವೆಯಾಗುವ ಸುದ್ದಿ ಹೊರಬಿದ್ದಿದೆ.

ಈ ವರ್ಷ ಜೋಡಿ ಮದುವೆಯಾಗೋದಂತೂ ನಿಶ್ಚಿತ. ಈಗಾಗ್ಲೇ ದೀಪಿಕಾ ಹಾಗೂ ರಣವೀರ್ ಶಾಪಿಂಗ್ ನಲ್ಲಿ ಬ್ಯುಸಿಯಾದ್ರೆ ಕುಟುಂಬಸ್ಥರು ಅತಿಥಿಗಳ ಪಟ್ಟಿ ಸಿದ್ಧಪಡಿಸುವುದ್ರಲ್ಲಿ, ಸ್ಥಳ ಹಾಗೂ ಇತರ ತಯಾರಿಯಲ್ಲಿ ತೊಡಗಿದ್ದಾರೆ. ಮದುವೆ ಇಟಲಿಯ ಲೇಕ್ ಕೊವೊದಲ್ಲಿ ನಡೆಯಲಿದೆಯಂತೆ. ಇದು ಇಟಲಿಯ ಮೂರನೇ ದೊಡ್ಡ ಲೇಕ್ ಆಗಿದೆ. ಈ ಸರೋವರದ ಆಳ ಸುಮಾರು 1,300 ಅಡಿಯಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...