alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ನ ರಾಮ್-ಲೀಲಾ ದೂರ ದೂರ !

ranveer-deepika-story-647_121616115532

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅಭಿಮಾನಿಗಳಿಗೆ ಇದು ಬೇಸರದ ಸುದ್ದಿ. ಬಾಲಿವುಡ್ ನ ಬಾಜಿರಾವ್ ಹಾಗೂ ಮಸ್ತಾನಿ ಈಗ ಬೇರೆ ಬೇರೆಯಾಗಿದ್ದಾರಂತೆ. ದೀಪಿಕಾ ಹಾಗೂ ರಣವೀರ್ ಲವ್ ಬ್ರೇಕಪ್ ಆಗಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ.

4 ವರ್ಷಗಳಿಂದ ಇವರಿಬ್ರೂ ಪರಸ್ಪರ ಪ್ರೀತಿಸ್ತಾ ಇದ್ರು. ಪಾರ್ಟಿ, ಫಂಕ್ಷನ್ ಗಳಲ್ಲೆಲ್ಲ ಜೊತೆಯಾಗಿಯೇ ಕಾಣಿಸಿಕೊಳ್ತಿದ್ರು. ಅವಾರ್ಡ್ ಫಂಕ್ಷನ್ ಗಳಲ್ಲಿ ಬಹಿರಂಗವಾಗಿಯೇ ತಾರಾ ಜೋಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಆದ್ರೆ ಕಳೆದ ಕೆಲದಿನಗಳಿಂದ ಇಬ್ಬರ ಮಧ್ಯೆ ಎಲ್ಲವೂ ಮೊದಲಿನಂತಿಲ್ಲ.

ರಣವೀರ್ ಹಾಗೂ ದೀಪಿಕಾ ಜೊತೆಯಾಗಿ ಕಾಣಿಸಿಕೊಳ್ತಾ ಇಲ್ಲ. ಪದ್ಮಾವತಿ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸ್ತಿದ್ದಾರೆ. ಆದ್ರೆ ರಣವೀರ್ ಸ್ವಿಜ್ಡರ್ಲೆಂಡ್ ನಲ್ಲಿ ಹಾಲಿಡೇ ಎಂಜಾಯ್ ಮಾಡಲು ತೆರಳಿದ್ರು, ದೀಪಿಕಾ ಜೊತೆಗೆ ಹೋಗಿರಲಿಲ್ಲ. ಇತ್ತೀಚೆಗಷ್ಟೆ ರಣವೀರ್ ಡೆಂಟಲ್ ಸರ್ಜರಿ ಕೂಡ ಮಾಡಿಸ್ಕೊಂಡಿದ್ದಾರೆ. ಅವರ ಆರೋಗ್ಯ ವಿಚಾರಿಸಲು ಕೂಡ ದೀಪಿಕಾ ಬಾರದೇ ಇರೋದು ನೋಡಿ ಇಬ್ಬರ ಬ್ರೇಕಪ್ ಆಗಿದೆ ಅನ್ನೋ ಗುಮಾನಿ ಹೆಚ್ಚಾಗಿದೆ.

ಇದು ಕೇವಲ ಊಹಾಪೋಹವೋ? ಅಥವಾ ನಿಜಕ್ಕೂ ರಾಮ್-ಲೀಲಾ ಜೋಡಿ ದೂರ ದೂರ ಆಗಿದ್ಯಾ ಅನ್ನೋದನ್ನು ದೀಪಿಕಾ ಹಾಗೂ ರಣವೀರ್ ಸಿಂಗ್ ಖಚಿತಪಡಿಸಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...