alex Certify
ಕನ್ನಡ ದುನಿಯಾ       Mobile App
       

Kannada Duniya

ಸೋನಂಗಾಗಿ ರಣವೀರ್-ಅರ್ಜುನ್ ಕಪೂರ್ ಹಾಡಿದ್ರು ಈ ಹಾಡು

ನಟಿ ಸೋನಂ ಕಪೂರ್ ತಮ್ಮ ಬಹು ಕಾಲದ ಗೆಳೆಯ ಆನಂದ್ ಅಹುಜಾ ಜೊತೆ ಮುಂಬೈನಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಈ ಸಂಭ್ರಮದ ಗಳಿಗೆಗೆ ಕಪೂರ್ ಕುಟುಂಬ ಹಾಗೂ ಅಹುಜಾ ಕುಟುಂಬದ ಜೊತೆ ಬಾಲಿವುಡ್ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ.

ಸೋನಂ ಸಹೋದರ ಹರ್ಷವರ್ಧನ್ ಕಪೂರ್, ಸೋದರಿ ರಿಯಾ ಕಪೂರ್ ವಿವಾಹ ಸಮಾರಂಭದ ಕೆಲ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು, ವೈರಲ್ ಆಗಿದೆ. ಸೋನಂ ಸಹೋದರ ಸಂಬಂಧಿಗಳಾದ ಅರ್ಜುನ್ ಕಪೂರ್, ಜಾಹ್ನವಿ ಕಪೂರ್, ರಿಯಾ ಕಪೂರ್ ಸೇರಿದಂತೆ ಇಡೀ ಕಪೂರ್ ಕುಟುಂಬ ವಿವಾಹ ಸಮಾರಂಭದಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದೆ.

ಅದರಲ್ಲೂ ಅರ್ಜುನ್ ಕಪೂರ್, ರಣವೀರ್ ಸಿಂಗ್ ಜೊತೆಗೂಡಿ ಸೋನಂ ಕಪೂರ್ ಗೆ ಪ್ರಿಯವಾದ ‘ಮಸಕ್ಕಲಿ’ ಹಾಡನ್ನು ಹಾಡಿದ್ದು, ವಿವಾಹ ಸಮಾರಂಭದ ಮೆರಗನ್ನು ಹೆಚ್ಚಿಸಿದೆ. ವಿವಾಹ ಸಮಾರಂಭದ ಬಳಿಕ ಬಾಲಿವುಡ್ ಸೆಲೆಬ್ರಿಟಿಗಳಿಗೆ ಅದ್ದೂರಿ ಪಾರ್ಟಿಯನ್ನೂ ಆಯೋಜಿಸಲಾಗಿದ್ದು, ಶಾರೂಕ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...