alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿಕಾ-ರಣವೀರ್ ಸಂಬಂಧದ ಗುಟ್ಟು ರಟ್ಟು ಮಾಡಿದ ಸ್ನೇಹಿತ

ಬಾಲಿವುಡ್‌ನ ಸ್ಟಾರ್ ಜೋಡಿ ಹಕ್ಕಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆ ಯಾವಾಗ ಎನ್ನುವ ಅನೇಕರ ಪ್ರಶ್ನೆಗೆ ಉತ್ತರವಾಗಿ, ಇವರಿಬ್ಬರ ಆತ್ಮೀಯ ಸ್ನೇಹಿತರೊಬ್ಬರು ಗುಟ್ಟು ರಟ್ಟು ಮಾಡಿದ್ದಾರೆ.

ಬಾಲಿವುಡ್ ಅಂಗಳದಲ್ಲಿ ಈ ಹಿಂದೆ ನವೆಂಬರ್ 20 ರಂದು ಮದುವೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಬಳಿಕ ಮುಂದಿನ ವರ್ಷಕ್ಕೆ ಹೋಗಿದೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಆಪ್ತ ಸ್ನೇಹಿತರೊಬ್ಬರ ಪ್ರಕಾರ, ಮದುವೆ ದಿನಾಂಕ ನಿಗದಿ ಮಾಡುವ ವಿಚಾರದಲ್ಲಿ ರಣವೀರ್ ಸಿಂಗ್, ದೀಪಿಕಾ ಪಡುಕೋಣೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಅವರು ಒಪ್ಪಿದ ದಿನ ಇಬ್ಬರ ಮದುವೆ ನಡೆಯಲಿದೆ ಎಂದಿದ್ದಾರೆ.

ಈಗಾಗಲೇ ಇಬ್ಬರ ಮದುವೆಗೆ ಎರಡು ಕುಟುಂಬಗಳು ಅಗತ್ಯ ಸಿದ್ಧತೆ ನಡೆಸಿಕೊಂಡಿದ್ದು, ಇಬ್ಬರು ಸ್ಟಾರ್ ಗಳ ಅಮ್ಮಂದಿರು ಹಲವು ತಿಂಗಳ ಹಿಂದೆಯೇ ಮದುವೆ ಶಾಪಿಂಗ್ ಮುಗಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ದೀಪಿಕಾ- ರಣಬೀರ್ ಜೋಡಿ ತಮ್ಮ ಆಪ್ತ ಸ್ನೇಹಿತ ಹಾಗೂ ಸಂಬಂಧಿಗಳ ಸಮ್ಮುಖದಲ್ಲಿ ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರಂತೆ.

ರಣವೀರ್ ಪ್ರೀತಿಯ ಬಗ್ಗೆ ಮಾತನಾಡಿರುವ ಸ್ನೇಹಿತರೊಬ್ಬರು, ರಣವೀರ್ ಅವರು ದೀಪಿಕಾ ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದು, ಆಕೆಯನ್ನೇ ಮದುವೆಯಾಗಿ, ಸಂಸಾರ ಹೂಡಬೇಕೆಂದು ನಿರ್ಧರಿಸಿದ್ದಾರೆ. ಆದ್ದರಿಂದ ದೀಪಿಕಾ ಮದುವೆ ದಿನಾಂಕ ನಿಗದಿ ಮಾಡಿದ ಮರು ಗಳಿಗೆಯೇ ಮದುವೆಯಾಗುತ್ತಾರೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...