alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿಕಾ ಮದುವೆ ಹೇಗೆ ನಡೆಯಲಿದೆ ಗೊತ್ತಾ…?

ಮತ್ತೊಂದು ಬಾಲಿವುಡ್ ಸೆಲೆಬ್ರಿಟಿ ಕಪಲ್ ಹಸೆಮಣೆ ಏರೋದಕ್ಕೆ ಸರ್ವ ಸಿದ್ಧತೆಗಳು ಭರದಿಂದ ಸಾಗಿದೆ. ಆ ಜೋಡಿ ಮತ್ತಾವುದೂ ಅಲ್ಲ ಬಾಲಿವುಡ್ ನ ಪದ್ಮಾವತಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಕಪೂರ್.

ನವೆಂಬರ್ ನಲ್ಲಿ ದೀಪಿಕಾ ಮತ್ತು ರಣ್ವೀರ್ ಕುಟುಂಬಸ್ಥರು ಮತ್ತು ಕೆಲ ಸ್ನೇಹಿತರ ಸಮಕ್ಷಮದಲ್ಲಿ ಇಟಲಿಯಲ್ಲಿ ಮದುವೆ ನಡೆಯಲಿದೆ ಅಂತ ಹೇಳಲಾಗ್ತಿದೆ. ವಿವಾಹದ ನಂತರ ಭಾರತಕ್ಕೆ ಮರಳುವ ಜೋಡಿ ಚಿತ್ರರಂಗದ ಗಣ್ಯರು ಮತ್ತು ಇತರರಿಗಾಗಿ ಅದ್ಧೂರಿ ಆರತಕ್ಷತೆಯನ್ನ ಏರ್ಪಡಿಸಲಿದ್ದಾರೆ.

ಕುಟುಂಬದ ಮೂಲಗಳ ಪ್ರಕಾರ ಸಿಂಧಿ ಸಂಪ್ರದಾಯದಂತೆ ಶಾಸ್ತ್ರಬದ್ಧವಾಗಿ ವಿವಾಹವಾಗೋದಕ್ಕೆ ರಣ್ವೀರ್ ಬಯಸಿದ್ದಾರಂತೆ. ವಿವಾಹದ ಪ್ರತಿ ಆಚರಣೆಯೂ ಸಿಂಧಿ ಸಂಪ್ರದಾಯದಂತೆ ಇರಬೇಕು ಅಂತ ಕುಟುಂಬಕ್ಕೆ ರಣ್ವೀರ್ ಈಗಾಗ್ಲೇ ತಿಳಿಸಿದ್ದಾರಂತೆ. ಹಾಗಾಗಿ ದೀಪಿಕಾ ಮತ್ತು ರಣ್ವೀರ್ ವಸ್ತ್ರಗಳಿಂದ ಹಿಡಿದು ಪ್ರತಿಯೊಂದು ಶಾಸ್ತ್ರಗಳು ಸಿಂಧಿ ಸಂಪ್ರದಾಯದ ಮದುವೆ ಪದ್ಧತಿಯ ಹಾಗೆ ಇರಲಿದೆ.

ವರ್ಷದ ಆರಂಭದಿಂದಲೇ ದೀಪ್ವೀರ್ ಜೋಡಿ ಈ ವರ್ಷ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ ಅನ್ನೋ ಸುದ್ದಿ ಇತ್ತು. ಈ ಬಗ್ಗೆ ಇಬ್ಬರನ್ನು ಮಾಧ್ಯಮಗಳು ಮಾತಿಗೆಳೆದಾಗ್ಲೆಲ್ಲಾ ಸದ್ಯದಲ್ಲೇ ನಿಮಗೆ ಎಲ್ಲವೂ ಗೊತ್ತಾಗುತ್ತೆ ಅಂತ ಹೇಳಿ ಇಬ್ಬರು ಸುಮ್ಮನಾಗ್ತಿದ್ರು. 2013 ರಲ್ಲಿ ಸಂಜಯ್ ಲೀಲಾ ಬನ್ಸಾಲಿ ಅಭಿನಯದ ‘ರಾಮ್ ಲೀಲಾ’ ಚಿತ್ರದ ವೇಳೆ ಇಬ್ಬರ ಮಧ್ಯೆ ಪ್ರೀತಿ ಶುರುವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...