alex Certify
ಕನ್ನಡ ದುನಿಯಾ       Mobile App
       

Kannada Duniya

ವಿರುಷ್ಕಾ ಮದುವೆ ಸ್ಥಳವನ್ನು ನಕಲು ಮಾಡ್ತಿದ್ದಾರೆ ದೀಪಿ-ರಣವೀರ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾರಂತೆ ಇಟಲಿಯಲ್ಲಿ ಇನ್ನೊಂದು ಬಾಲಿವುಡ್ ಜೋಡಿ ಮದುವೆಗೆ ತಯಾರಿ ನಡೆಸಿದೆ. ಮೂಲಗಳ ಪ್ರಕಾರ ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಟಲಿಯಲ್ಲಿ ಮದುವೆಯಾಗಲಿದ್ದಾರೆ.

ನವೆಂಬರ್ ನಲ್ಲಿ ಇಟಲಿಯಲ್ಲಿ ಮದುವೆ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಕಳೆದ 5 ವರ್ಷಗಳಿಂದ ಸಂಬಂಧದಲ್ಲಿರುವ ರಣವೀರ್ ಹಾಗೂ ದೀಪಿಕಾ ಈವರೆಗೂ ತಮ್ಮ ಪ್ರೀತಿ ಬಗ್ಗೆ ಮಾಧ್ಯಮದ ಮುಂದೆ ತುಟಿ ಬಿಚ್ಚಿಲ್ಲ. ಇಬ್ಬರೂ ನವೆಂಬರ್ ನಲ್ಲಿ ಭಾರತದಲ್ಲೇ ಮದುವೆಯಾಗ್ತಾರೆ ಎಂಬ ಸುದ್ದಿಯಿತ್ತು. ಆದ್ರೀಗ ಇಟಲಿ ಹೆಸರು ಕೇಳಿ ಬರ್ತಿದೆ. ಸ್ವಿಜರ್ಲ್ಯಾಂಡ್ ಸರ್ಕಾರ ಅಲ್ಲಿ ಮದುವೆಯಾಗುವಂತೆ ಜೋಡಿಗೆ ಆಹ್ವಾನ ನೀಡಿದೆ. ರಣವೀರ್ ಸ್ವಿಜಲ್ಯಾಂಡ್ ಪ್ರವಾಸೋದ್ಯಮದ ರಾಯಭಾರಿ. ಹಾಗಾಗಿ ನಮ್ಮ ದೇಶದಲ್ಲಿ ಮದುವೆಯಾಗಿ ಎಂದು ಅಲ್ಲಿನ ಸರ್ಕಾರ ಹೇಳಿದೆ.

ರಣವೀರ್ ಕೈನಲ್ಲಿ ಎರಡು ಚಿತ್ರಗಳಿವೆ. ಸಿಂಬಾ ಹಾಗೂ ಗಲ್ಲಿ ಬಾಯ್ ಚಿತ್ರದ ಶೂಟಿಂಗ್ ನಲ್ಲಿ ರಣವೀರ್ ಬ್ಯುಸಿ. ಆದ್ರೆ ದೀಪಿಕಾ ಮಾತ್ರ ಪದ್ಮಾವತ್ ನಂತ್ರ ಯಾವುದೇ ಚಿತ್ರಕ್ಕೆ ಸಹಿ ಹಾಕಿಲ್ಲ. ಮದುವೆಗೆ ದಿನಾಂಕ ಅಡ್ಡಿ ಬರದಿರಲಿ ಎನ್ನುವ ಕಾರಣಕ್ಕೆ ದೀಪಿಕಾ ಚಿತ್ರ ಒಪ್ಪಿಕೊಂಡಿಲ್ಲ ಎನ್ನಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...