alex Certify
ಕನ್ನಡ ದುನಿಯಾ       Mobile App
       

Kannada Duniya

ಇಬ್ಬರು ನಟಿಯರ ಗಲಾಟೆಯಲ್ಲಿ ಈ ನಟನಿಗೆ ಅವಮಾನ

ranveer-cover

ಬಾಲಿವುಡ್ ಬೆಡಗಿಯರಾದ ದೀಪಿಕಾ ಪಡುಕೋಣೆ ಹಾಗೂ ಕತ್ರಿನಾ ಕೈಫ್ ಹಾವು-ಮುಂಗುಸಿಯಂತೆ. ಇಬ್ಬರೂ ರಣಬೀರ್ ಕಪೂರ್ ಮಾಜಿ ಗರ್ಲ್ ಫ್ರೆಂಡ್ಸ್. ರಣಬೀರ್ ವಿಚಾರದಲ್ಲಿಯೇ ಇಬ್ಬರ ನಡುವೆ ದ್ವೇಷ ಶುರುವಾಗಿದ್ದು. ಆದ್ರೆ ಈ ನಟಿಯರ ಶೀತಲ ಸಮರದಲ್ಲಿ ರಣವೀರ್ ಸಿಂಗ್ ಪೇಚಾಟಕ್ಕೆ ಸಿಲುಕಿದ್ದಾನೆ.

ರಣವೀರ್ ಸಿಂಗ್ ಕತ್ರಿನಾಳ ಫ್ರೆಂಡ್. ಹಾಗಂತ ಗರ್ಲ್ ಫ್ರೆಂಡ್ ದೀಪಿಕಾ ಪಡುಕೋಣೆ ಮನಸ್ಸಿಗೆ ವಿರುದ್ಧವಾಗಿ ಕೆಲಸ ಮಾಡಲಾರ. ಇದೇ ಕಾರಣಕ್ಕೆ ಈವರೆಗೂ ರಣವೀರ್ ಹಾಗೂ ಕತ್ರಿನಾ ಒಟ್ಟಿಗೆ ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿಲ್ಲ. ಬಹುತೇಕ ಎಲ್ಲ ಸ್ಟಾರ್ ನಟರ ಜೊತೆ ಕತ್ರಿನಾ ನಟಿಸಿದ್ದಾಳೆ. ಆದ್ರೆ ಈವರೆಗೂ ರಣವೀರ್ ಸಿಂಗ್ ಜೊತೆ ಕಾಣಿಸಿಕೊಂಡಿಲ್ಲ. ಇಬ್ಬರನ್ನು ತೆರೆ ಮೇಲೆ ಒಟ್ಟಿಗೆ ತರಬೇಕೆಂಬ ಆಸೆ ನಿರ್ದೇಶಕಿ ನಿತ್ಯಾ ಮೆಹ್ರಾ ಅವರದ್ದು. ಆದ್ರೆ ನಿತ್ಯಾ ನೀಡಿದ್ದ ಆಫರ್ ತಳ್ಳಿ ಹಾಕಿದ್ದಾನೆ ರಣವೀರ್ ಸಿಂಗ್.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿತ್ಯಾ ಮೆಹ್ರಾ ಫ್ರೆಂಡ್ ಝೋಯಾ ಆಕ್ತರ್ ಕೂಡ ಇಬ್ಬರ ಜೊತೆ ಮಾತುಕತೆ ನಡೆಸಿದ್ದಾರೆ. ಝೋಯಾ ಪಾರ್ಟಿಯಲ್ಲಿ ಇಬ್ಬರೂ ಪಾಲ್ಗೊಂಡಿದ್ದರು ಎನ್ನಲಾಗಿದೆ. ಆದ್ರೆ ದೀಪಿಕಾಳನ್ನು ಸಂತೋಷಪಡಿಸಲು ಆಫರ್ ತಳ್ಳಿಹಾಕಿದ್ದಾನಂತೆ ರಣವೀರ್.

ಮಾಧ್ಯಮಗಳ ಈ ಸುದ್ದಿಯನ್ನು ರಣವೀರ್ ಸಿಂಗ್ ಆಪ್ತ ಮೂಲ ತಳ್ಳಿಹಾಕಿದೆ. ಇದೆಲ್ಲ ಸುಳ್ಳು. ಈ ಆಫರ್ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...