alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಮುಂದೂಡಿಕೆಯಾಯ್ತು ರಣವೀರ್-ದೀಪಿಕಾ ಮದುವೆ…!

ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇದೇ ನವೆಂಬರ್ 20 ರಂದು ಇಟಲಿಯಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿದ್ದು, ಇದೀಗ ಮದುವೆಗೆ ಸಂಬಂಧಿಸಿದಂತೆ ಮತ್ತೊಂದು ಮಾಹಿತಿ ಬಹಿರಂಗವಾಗಿದೆ.

ನವೆಂಬರ್ ನಲ್ಲಿ ಮದುವೆ ಮಾಡಿಕೊಳ್ಳದೇ ಇರಲು ಈ ತಾರಾ ಜೋಡಿ ತೀರ್ಮಾನಿಸಿದೆ. ಅಂದುಕೊಂಡ ಹಾಗೇ ಎಲ್ಲವೂ ನಡೆದಿದ್ದರೆ, ರಾಯಲ್ ವೆಡ್ಡಿಂಗ್ ಗೆ ಇಟಲಿ ಸಾಕ್ಷಿಯಾಗುತ್ತಿತ್ತು. ಆದ್ರೆ, ತಮ್ಮ ಮದುವೆಯ ದಿನಾಂಕ ಬಹಿರಂಗವಾಗಿರುವುದರಿಂದ, ಈ ದಿನಾಂಕವನ್ನು ಮುಂದೂಡಲು ದೀಪಿಕಾ ಹಾಗೂ ರಣವೀರ್ ಪ್ಲಾನ್ ಮಾಡಿಕೊಂಡಿದ್ದಾರೆನ್ನಲಾಗಿದೆ.

ಈ ಜೋಡಿಯ ಮದುವೆ ನವೆಂಬರ್ ನಲ್ಲಿ ಎಂಬ ಸುದ್ದಿ ಹರಿದಾಡಲು ಒಂದು ಕಾರಣವೂ ಇತ್ತು. ಆ ವೇಳೆ ಇವರುಗಳು ಯಾವುದೇ ಕಾರ್ಯಕ್ರಮ ಅಥವಾ ಶೂಟಿಂಗ್ ಗೆ ಡೇಟ್ ನೀಡಿರಲಿಲ್ಲ ಎಂಬುದು ಬಯಲಾಗುತ್ತಿದ್ದಂತೆ, ಇಬ್ಬರ ಮದುವೆ ನವೆಂಬರ್ ನಲ್ಲಿ ಎಂಬ ಸುದ್ದಿ ಹಬ್ಬಿತ್ತು. ಆದರೆ ತಮ್ಮ ವಿವಾಹದ ಕುರಿತು ರಣವೀರ್ ಅಥವಾ ದೀಪಿಕಾ ತುಟಿ ಬಿಚ್ಚಿರಲಿಲ್ಲ.

2019 ರ ವರ್ಷದ ಆರಂಭದಲ್ಲಿ ಈ ತಾರಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎಂಬ ಸುದ್ದಿ ಈಗ ಬಹಿರಂಗವಾಗಿದ್ದು, ಇದಕ್ಕೆ ಇಟಲಿಯನ್ನೇ ಆಯ್ದುಕೊಳ್ಳಲಾಗಿದೆ. ದೀಪಿಕಾ ಹಾಗೂ ರಣವೀರ್ ಮದುವೆ ಮುಂದೂಡಿಕೆಯಾಗಿದ್ದಕ್ಕೆ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ತಮ್ಮ ಫೇವರೆಟ್ ಜೋಡಿಯ ಮದುವೆಯ ಸಮಾರಂಭವನ್ನು ನೋಡಲು ಅಭಿಮಾನಿಗಳು ಇನ್ನಷ್ಟು ದಿನ ಕಾಯಲೇಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...