alex Certify
ಕನ್ನಡ ದುನಿಯಾ       Mobile App
       

Kannada Duniya

ಪದ್ಮಾವತಿ ವಿವಾದದ ಚಿಂತೆಯಿಲ್ದೆ ಎಂಜಾಯ್ ಮಾಡ್ತಿದೆ ಈ ಜೋಡಿ

ಸಂಜಯ್ ಲೀಲಾ ಬನ್ಸಾಲಿ ಪದ್ಮಾವತಿ ಚಿತ್ರ ವಿವಾದದಲ್ಲಿದೆ. ಚಿತ್ರದಲ್ಲಿ ನಟಿಸಿರುವ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ವೈಯಕ್ತಿಕ ಜೀವನದ ಎಂಜಾಯ್ಮೆಂಟ್ ಗೆ ಪದ್ಮಾವತಿ ವಿವಾದ ಯಾವುದೇ ಅಡ್ಡಿಯುಂಟು ಮಾಡಿಲ್ಲ. ಕೆಲ ದಿನಗಳ ಹಿಂದಷ್ಟೆ ದೀಪಿಕಾ ಹಾಗೂ ರಣವೀರ್ ಸಿಂಗ್ ಸ್ನೇಹಿತ ಜೋಯಾ ಅಖ್ತರ್ ಮನೆಯಿಂದ ಹೊರ ಬರ್ತಿದ್ದಾಗ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.

ಮೂಲಗಳ ಪ್ರಕಾರ ಜೋಯಾ ಅಖ್ತರ್ ಮನೆಯಲ್ಲಿ ಪಾರ್ಟಿ ಏರ್ಪಡಿಸಲಾಗಿತ್ತು. ಪಾರ್ಟಿಯಲ್ಲಿ ದೀಪಿಕಾ ಜೋಡಿ ಭರ್ಜರಿ ಎಂಜಾಯ್ ಮಾಡಿದ್ದಾರೆ ಎನ್ನಲಾಗ್ತಿದೆ. ಪದ್ಮಾವತಿ ವಿವಾದವಾಗ್ತಿದ್ದಂತೆ ಈ ಬಗ್ಗೆ ದೀಪಿಕಾ ಹಾಗೂ ರಣವೀರ್ ಪ್ರತಿಕ್ರಿಯೆ ನೀಡಿದ್ದರು. ಇದೊಂದು ದುಃಖದ ವಿಷ್ಯವೆಂದಿದ್ದ ಕಲಾವಿದರು,ಸಂಜಯ್ ಲೀಲಾ ಬನ್ಸಾಲಿ ಜೊತೆ ಸದಾ ಇರುತ್ತೇವೆ ಎಂದಿದ್ದರು.

ಪದ್ಮಾವತಿ ಚಿತ್ರ ಬಿಡುಗಡೆ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಡಿಸೆಂಬರ್ 1ರಂದು ಬಿಡುಗಡೆಯಾಗಬೇಕಿದ್ದ ಪದ್ಮಾವತಿ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಚಿತ್ರಕ್ಕಾಗಿ 160 ಕೋಟಿ ರೂಪಾಯಿ ವೆಚ್ಛ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...