alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಗೂ ಮೊದಲೇ ‘ಪದ್ಮಾವತಿ’ಗೆ ಬಿಗ್ ಶಾಕ್

ಸೂರತ್: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಆರಂಭದಿಂದಲೂ ವಿವಾದಕ್ಕೆ ಒಳಗಾಗಿದೆ. ಚಿತ್ರೀಕರಣ ಸಂದರ್ಭದಲ್ಲೇ ಹಲವು ಅಡ್ಡಿ ಆತಂಕ ಎದುರಾಗಿತ್ತು. ಈಗ ಮತ್ತೊಂದು ಘಟನೆ ನಡೆದಿದೆ.

ಗುಜರಾತ್ ನ ಸೂರತ್ ಶಾಪಿಂಗ್ ಮಾಲ್ ಒಂದರಲ್ಲಿ ಕಲಾವಿದ ಕರಣ್ ಬರೋಬ್ಬರಿ 48 ಗಂಟೆಗಳ ಕಾಲ ಶ್ರಮವಹಿಸಿ ರಚಿಸಿದ್ದ ‘ಪದ್ಮಾವತಿ’ ರಂಗೋಲಿಯನ್ನು ಕೆಲವರು ಹಾಳು ಮಾಡಿದ್ದಾರೆ.

ಪೋಸ್ಟರ್ ರೀತಿಯಲ್ಲಿ ಪದ್ಮಾವತಿ ರಂಗೋಲಿ ರಚಿಸಲಾಗಿದ್ದು, ಬಹು ಆಕರ್ಷಕವಾಗಿತ್ತು. 100 ಕ್ಕೂ ಅಧಿಕ ಮಂದಿ ಮಾಲ್ ಮೇಲೆ ದಾಳಿ ಮಾಡಿ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ರಂಗೋಲಿಯನ್ನು ಹಾಳು ಮಾಡಿದ್ದಾರೆ.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ದೀಪಿಕಾ, ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ವಿಚಾರ ಭಾರೀ ಚರ್ಚೆಗೆ ಒಳಗಾಗಿದೆ.

ಶಾಹಿದ್ ಕಪೂರ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಪದ್ಮಾವತಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಭಾರೀ ಸೌಂಡ್ ಮಾಡ್ತಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...