alex Certify
ಕನ್ನಡ ದುನಿಯಾ       Mobile App
       

Kannada Duniya

ಆಲಿಯಾಳಿಂದ ಪಾಸಿಟಿವ್ ಬದಲಾವಣೆ ಬಂದಿದೆ ಎಂದ ರಣಬೀರ್

ಬಾಲವುಡ್ ನಟ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಸದ್ಯ ಚರ್ಚೆಯಲ್ಲಿದ್ದಾರೆ. ಇಬ್ಬರೂ ಕರಣ್ ಜೋಹರ್ ಬ್ರಹ್ಮಾಸ್ತ್ರದಲ್ಲಿ ನಟಿಸುತ್ತಿದ್ದಾರೆ. ಆರಂಭದಲ್ಲಿ ಇಬ್ಬರು ಒಳ್ಳೆ ಸ್ನೇಹಿತರಾಗಿದ್ದಾರೆ ಎನ್ನಲಾಗ್ತಾ ಇತ್ತು. ದಿನ ಕಳೆದಂತೆ ಸ್ನೇಹ ಪ್ರೀತಿಗೆ ತಿರುಗಿದೆ ಎಂಬ ಸುದ್ದಿ ಹಬ್ಬಿದೆ. ತಮ್ಮಿಬ್ಬರ ಮಧ್ಯೆ ಏನೋ ಇದೆ ಎಂಬುದನ್ನು ಇಬ್ಬರು ಒಪ್ಪಿಕೊಂಡಿದ್ದಾರೆ ಕೂಡ.

ಸಂದರ್ಶನವೊಂದರಲ್ಲಿ ಮಾತನಾಡಿದ ರಣಬೀರ್ ಕಪೂರ್, ಆಲಿಯಾಳಿಂದ ನನ್ನ ಜೀವನದಲ್ಲಿ ಪಾಸಿಟಿವ್ ಬದಲಾವಣೆಯಾಗಿದೆ ಎಂದಿದ್ದಾನೆ. ನಟಿಯಾಗಿ ಆಕೆಯನ್ನು ತುಂಬಾ ಇಷ್ಟಪಡ್ತೇನೆ. ತುಂಬಾ ಕಷ್ಟಪಡ್ತಾಳೆ. ಶಿಸ್ತಿನಿಂದ ಕೆಲಸ ಮಾಡ್ತಾಳೆಂದು ರಣಬೀರ್ ಹೇಳಿದ್ದಾನೆ.

ಪ್ರೀತಿ ಬಗ್ಗೆ ಕೇಳಿದ ಪ್ರಶ್ನೆಗೆ, ಪ್ರೀತಿಗೆ ಬಿದ್ದ ವ್ಯಕ್ತಿ ಅದ್ಭುತ ಕೆಲಸಗಳನ್ನು ಮಾಡ್ತಾನೆ. ಪ್ರೀತಿಯಲ್ಲಿರುವಾಗ ಜೀವನ ಸುಂದರವಾಗಿರುತ್ತದೆ ಎಂದಿದ್ದಾನೆ. ಆಲಿಯಾ ನಾನು ಇಬ್ಬರೂ ಪ್ರಾಣಿ ಪ್ರಿಯರು ಎಂದ ರಣಬೀರ್, ಬ್ರಹ್ಮಸ್ತ್ರದ ಬಗ್ಗೆ ಈಗ್ಲೇ ಮಾತನಾಡುವುದು ಆತುರವಾಗುತ್ತದೆ. ಕೆಲವೇ ದಿನಗಳಲ್ಲಿ ನಿಮಗೆ ಎಲ್ಲ ತಿಳಿಯಲಿದೆ ಎಂದು ಹೇಳಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...