alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಮುನ್ನಾಬಾಯ್ ಅಗ್ತಿದ್ದಾರೆ ಸಂಜು, ಸರ್ಕಿಟ್ ಪಾತ್ರ ಮಾಡ್ತಿರೋದು ಯಾರು ಗೊತ್ತಾಯ್.?

ಮುನ್ನಾಬಾಯ್ ಎಂಬಿಬಿಎಸ್ ಮತ್ತು ಲಗೇ ರಹೊ ಮುನ್ನಾಬಾಯ್ ಚಿತ್ರಗಳು ಸಂಜಯ್ ದತ್ ಬದುಕಿನ ಟಾಪ್ ಮೋಸ್ಟ್ ಚಿತ್ರಗಳು. ಸಂಜಯ್ ದತ್ ಬಯೋಪಿಕ್ ಆದಂತಾ ಸಂಜು ಸಿನಿಮಾದಲ್ಲೂ ಮುನ್ನಾಬಾಯ್ ಸಿನಿಮಾದ ಭಾಗವನ್ನು ರೀಕ್ರಿಯೇಟ್ ಮಾಡಲಾಗಿತ್ತು.

ಈಗ ತಾಜಾ ಸುದ್ದಿ ಏನಪ್ಪಾ ಅಂದ್ರೆ ಮುನ್ನಾಬಾಯ್ ಸರಣಿಯ ಮೂರನೇ ಸಿನಿಮಾ ಬರ್ತಿದೆ. ರಾಜ್ಕುಮಾರ್ ಹಿರಾನಿ ಆಕ್ಷನ್ ಕಟ್ ನಲ್ಲೇ ಮುನ್ನಾಬಾಯ್ ಸರಣಿಯ ಮೂರನೇ ಚಿತ್ರ ಬರ್ತಿದೆ.

ಮುನ್ನಾಬಾಯ್ ಸರಣಿಯ ಚಿತ್ರಗಳಲ್ಲಿ ಸರ್ಕಿಟ್ ಪಾತ್ರ ತುಂಬಾನೇ ಫನ್ಫುಲ್ ಕ್ಯಾರೆಕ್ಟರ್. ಮುನ್ನಬಾಯ್ ಸರಣಿಯ ಮೊದಲ ಎರಡು ಸಿನಿಮಾಗಳಲ್ಲಿ ಸರ್ಕಿಟ್ ಪಾತ್ರವನ್ನು ನಿರ್ವಹಿಸಿದ್ದು ನಟ ಅರ್ಶದ್ ವಾರ್ಸಿ. ಆದ್ರೆ ಮೂರನೇ ಚಿತ್ರದಲ್ಲಿ ಸರ್ಕಿಟ್ ಪಾತ್ರವನ್ನು ರಣ್ಬೀರ್ ಕಪೂರ್ ಪ್ಲೇ ಮಾಡಲಿದ್ದಾರಂತೆ.

ಅರ್ಶದ್ ವಾರ್ಸಿ ಸಿನಿ ಕೆರಿಯರ್ ನಲ್ಲೇ ಸರ್ಕಿಟ್ ಪಾತ್ರ ತುಂಬಾನೇ ಮಹತ್ವಪೂರ್ಣವಾದದ್ದು. ಆ ಪಾತ್ರದಲ್ಲಿ ಜನರು ರಣ್ಬೀರ್ ಕಪೂರ್ ರನ್ನ ನೋಡೋದಕ್ಕೆ ಇಷ್ಟಪಡ್ತಿಲ್ಲ. ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಈಗ ಸಾಕಷ್ಟು ಚರ್ಚೆಯನ್ನ ಹುಟ್ಟುಹಾಕಿದೆ. ಅರ್ಶದ್ ವಾರ್ಸಿ ಹೊರತಾಗಿ ಮತ್ಯಾರನ್ನು ಅಭಿಮಾನಿಗಳು ಸರ್ಕಿಟ್ ಪಾತ್ರದಲ್ಲಿ ನೋಡೋಕೆ ಇಷ್ಟಪಡ್ತಿಲ್ಲ. ರಣ್ಬೀರ್ ಕಪೂರ್ ಆಯ್ಕೆ ಒಂದು ಮೂರ್ಖತನದ ನಿರ್ಧಾರ ಅಂತ ನೆಟಿಜನ್ಸ್ ಕಾಮೆಂಟ್ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...