alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡನೇ ದಿನವೇ ದಾಖಲೆ ಬರೆದ ‘ಸಂಜು’

ರಣಬೀರ್ ಕಪೂರ್ ಅಭಿನಯದ ಸಂಜು ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಸಂಜು ಚಿತ್ರಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಚಿತ್ರ ಭರ್ಜರಿ ಗಳಿಕೆ ಕಾಣ್ತಿದೆ. ಬಿಡುಗಡೆಯಾದ ಮೊದಲ ದಿನ 34.75 ಕೋಟಿ ರೂಪಾಯಿ ಗಳಿಕೆ ಕಂಡ ಚಿತ್ರ ಎರಡನೇ ದಿನ 38.25 ಕೋಟಿ ಗಳಿಕೆ ಕಂಡಿದೆ. ಈ ಮೂಲಕ ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.

ಅತಿ ಹೆಚ್ಚು ಗಳಿಕೆ ಕಂಡ ಬಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೆ ಸಂಜು ಪಾತ್ರವಾಗಿದೆ. ಎರಡನೇ ದಿನ 38.25 ಕೋಟಿ ಗಳಿಕೆ ಕಂಡ ಚಿತ್ರ ಬಾಹುಬಲಿ ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ. ಬಾಹುಬಲಿ ಎರಡನೇ ದಿನ 40.28 ಕೋಟಿ ಗಳಿಕೆ ಕಂಡಿತ್ತು. ಆದ್ರೆ ರಣಬೀರ್, ಸಂಜು ಚಿತ್ರದ ಮೂಲಕ ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್ ದಾಖಲೆಯನ್ನು ಮುರಿದಿದ್ದಾರೆ.

ಎರಡನೇ ದಿನ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪಟ್ಟಿಯಲ್ಲಿ ಬಾಹುಬಲಿ ಮೊದಲ ಸ್ಥಾನದಲ್ಲಿದೆ. ಸಂಜು ಎರಡನೇ ಸ್ಥಾನದಲ್ಲಿದ್ದರೆ ಸುಲ್ತಾನ್ ಮೂರನೇ ಹಾಗೂ ರೇಸ್-3 ನಾಲ್ಕನೇ ಸ್ಥಾನದಲ್ಲಿದೆ. ಭಜರಂಗಿ ಭಾಯಿಜಾನ್ ಹಾಗೂ ದಬಂಗ್ ಐದನೇ ಹಾಗೂ 6ನೇ ಸ್ಥಾನದಲ್ಲಿದೆ.

ಸಂಜು 100 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಚಿತ್ರವಾಗಿದೆ. ಮೂರೇ ದಿನದಲ್ಲಿ ಚಿತ್ರ 100 ಕೋಟಿ ಗಳಿಕೆ ಕಾಣಲಿದೆ ಎನ್ನಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...