alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಟ್ಟ ಚಟದ ಬಗ್ಗೆ ಬಾಯ್ಬಿಟ್ಟ ಬಾಲಿವುಡ್ ನಟ

ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಬದುಕಿನ ಕುರಿತು ಸಾರ್ವಜನಿಕವಾಗಿ ತೆರೆದಿಡುವುದು ಬಹು ಅಪರೂಪ. ಅದರಲ್ಲೂ ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವವಾಗಿರುವ ಚಲನಚಿತ್ರ ನಟ- ನಟಿಯರು ವೈಯಕ್ತಿಕ ವಿಚಾರಗಳನ್ನು ಗುಟ್ಟಾಗಿಡಲು ಬಯಸುತ್ತಾರೆ. ಆದರೆ ಕೆಲವರು ಇದಕ್ಕೆ ಹೊರತಾಗಿದ್ದಾರೆ.

ಸಂಜಯ್ ದತ್ ಜೀವನಾಧರಿತ ‘ಸಂಜು’ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಬಾಲಿವುಡ್ ನಟ ರಣಬೀರ್ ಕಪೂರ್, ಇದೀಗ ಸಂದರ್ಶನವೊಂದರಲ್ಲಿ ತಮಗಿರುವ ಕೆಟ್ಟ ಚಟವೊಂದರ ಕುರಿತು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ತಾವು ಮದ್ಯವನ್ನು ಕೊಂಚ ಜಾಸ್ತಿ ಸೇವಿಸುತ್ತಿರುವುದಾಗಿ ಹೇಳಿಕೊಂಡಿರುವ ರಣಬೀರ್ ಕಪೂರ್ ಇದು ಒಳ್ಳೆಯದಲ್ಲ ಎಂಬುದರ ಅರಿವು ತಮಗಿದೆ ಎಂದಿದ್ದಾರೆ. ಅಂದ ಹಾಗೆ ರಣಬೀರ್ ಕಪೂರ್ ಕೋಲ್ಡ್ ಡ್ರಾಟ್ ಬಿಯರ್ ಅನ್ನು ಹೆಚ್ಚಾಗಿ ಸೇವಿಸುತ್ತಾರಂತೆ. ಈ ಚಟವನ್ನು ತೊರೆಯಲು ತಾವು ಬಯಸುವುದಾಗಿ ರಣಬೀರ್ ಕಪೂರ್ ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...