alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಕ್ ಅಪ್ ಬಗ್ಗೆ ಮೌನ ಮುರಿದ ರಣಬೀರ್

katrina-1

ಬಾಲಿವುಡ್ ನ ಯಂಗ್ ಜೋಡಿಯೊಂದು ಬೇರೆಯಾಗಿ ಆರು ತಿಂಗಳೇ ಕಳೆದಿದೆ. ಕತ್ರಿನಾ ಕೈಫ್ ಹಾಗೂ ರಣಬೀರ್ ಕಪೂರ್ ಬ್ರೇಕ್ ಅಪ್ ಈಗ ಹಳೆ ಸುದ್ದಿ. ಆದ್ರೆ ಈ ಬಗ್ಗೆ ಕತ್ರಿನಾ ಆಗ್ಲಿ, ರಣಬೀರ್ ಆಗ್ಲಿ ಮಾತನಾಡಿರಲಿಲ್ಲ. ಈಗ ರಣಬೀರ್ ಮೌನ ಮುರಿದಿದ್ದಾನೆ.

ಕತ್ರಿನಾ ಕೈಫ್ ಬ್ರೇಕ್ ಅಪ್ ಬಗ್ಗೆ ಕೊನೆಗೂ ರಣಬೀರ್ ಕಪೂರ್ ಬಾಯ್ಬಿಟ್ಟಿದ್ದಾನೆ. ಬ್ರೇಕ್ ಅಪ್ ಆಗಿ ಆರು ತಿಂಗಳ ನಂತ್ರ ರಣಬೀರ್ ಕಪೂರ್ ಈ ಬಗ್ಗೆ ಮಾತನಾಡಿದ್ದಾನೆ. ರಣಬೀರ್ ಹಾಗೂ ಕತ್ರಿನಾ ಬೇರೆಯಾಗಲು ಅನೇಕ ಕಾರಣಗಳಿವೆಯಂತೆ. ಅದ್ರಲ್ಲಿ ಸುಳ್ಳು ವದಂತಿ ಹಾಗೂ ವರದಿಗಳು ಕೂಡ ಒಂದು ಎಂದಿದ್ದಾನೆ ರಣಬೀರ್.

ಬ್ರೇಕ್ ಅಪ್ ನಿಂದ ಮನಸ್ಸಿಗೆ ನೋವಾಗುತ್ತದೆ ಎಂದು ರಣಬೀರ್ ಇದೇ ವೇಳೆ ಹೇಳಿದ್ದಾನೆ. ರಣಬೀರ್ ಜೀವನದಲ್ಲಿ ಕತ್ರಿನಾ ಅತ್ಯಂತ ಪ್ರಭಾವಶಾಲಿ ಮಹಿಳೆಯಾಗಿದ್ದಳಂತೆ. ಕೆಲ ದಿನಗಳ ಹಿಂದೆ ರಣಬೀರ್ ಕತ್ರಿನಾ ಮನೆಗೆ ಹೋಗಿದ್ದ ಎಂಬ ಸುದ್ದಿ ಹರಡಿತ್ತು. ಇದನ್ನು ರಣಬೀರ್ ಅಲ್ಲಗಳೆದಿದ್ದಾನೆ. ಇದೆಲ್ಲ ಸುಳ್ಳು. ಮಾಧ್ಯಮಗಳ ಒಂದು ವಿಭಾಗ ಇಂತಹ ಸುಳ್ಳು ಸುದ್ದಿಗಳನ್ನು ನೀಡುವುದರಲ್ಲಿ ನಿರತವಾಗಿರುತ್ತದೆ. ಇದು ಬೇಸರದ ಸಂಗತಿ ಎಂದಿದ್ದಾನೆ.

2009 ರಲ್ಲಿ ‘ಅಜಬ್ ಪ್ರೇಮ್ ಕಿ ಗಜಬ್ ಕಹಾನಿ’ ಯಲ್ಲಿ ಕತ್ರಿನಾ, ರಣಬೀರ್ ಭೇಟಿಯಾಗಿತ್ತು. ನಂತ್ರ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಅನೇಕ ದಿನಗಳ ಕಾಲ ಇಬ್ಬರು ಒಟ್ಟಿಗೆ ವಾಸವಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...